Homeಚುಚ್ಚದ ಜೇನು ಎಲ್ಲರಿಗೂ ಅಚ್ಚು ಮೆಚ್ಚು - ಶಿವರಾಂ ಪೈಲೂರು
ಚುಚ್ಚದ ಜೇನು ಎಲ್ಲರಿಗೂ ಅಚ್ಚು ಮೆಚ್ಚು - ಶಿವರಾಂ ಪೈಲೂರು
ಚುಚ್ಚದ ಜೇನು ಎಲ್ಲರಿಗೂ ಅಚ್ಚು ಮೆಚ್ಚು - ಶಿವರಾಂ ಪೈಲೂರು
Standard shipping in 2 working days

ಚುಚ್ಚದ ಜೇನು ಎಲ್ಲರಿಗೂ ಅಚ್ಚು ಮೆಚ್ಚು - ಶಿವರಾಂ ಪೈಲೂರು

 
₹140
Product Description

ಮಿಸ್ರಿ, ನಸ್ರಿ, ರಾಳಜೇನು, ಮೂಲಿಜೇನು, ಕಿರುಜೇನು, ನುಸಿಜೇನು (Tetragonula iridipennis/Indian stingless bee/Dammar bee) ಎಂಬಿತ್ಯಾದಿ ಹೆಸರುಗಳಿಂದ ಕರೆಯುವ ಮುಜಂಟಿ ಜೇನುಕುಟುಂಬಗಳನ್ನು ಗೂಡುಗಳಲ್ಲಿ ಸಾಕಿ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿರುವ ಜೇನುತುಪ್ಪವನ್ನು ಉತ್ಪಾದಿಸುವ ಕ್ರಮ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿದೆ. ಕೇರಳ ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಕರ್ನಾಟಕದಲ್ಲೂ ಅನೇಕರು ಮುಜಂಟಿ ಸಾಕಣೆ ಆರಂಭಿಸಿದ್ದಾರೆ.

ವಿಷಮುಕ್ತ ಕೃಷಿ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಹೆಚ್ಚು ಮಹತ್ವದ್ದೆನಿಸಿರುವ ಈ ಜೇನ್ನೊಣಗಳ ಪೋಷಣೆ ವಾಣಿಜ್ಯಿಕವಾಗಿಯೂ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ.

ಮುಜಂಟಿ ಸಾಕಣೆ ಕುರಿತು ಕೇರಳ ಮತ್ತು ಕರ್ನಾಟಕದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ನಡೆಸಿದ ಅಧ್ಯಯನ ಹಾಗೂ ಸ್ವತಃ ಈ ಗೂಡುಗಳನ್ನಿಟ್ಟು ಪಡೆದ ಪುಟ್ಟ ಅನುಭವವನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದೇನೆ. ಆಸಕ್ತರಿಗೆ ಇದೊಂದು ಉಪಯುಕ್ತ ಕೈಪಿಡಿಯಾಗುವುದೆಂಬ ಆಶಯ.

Share

Secure Payments

Shipping in India

Great Value & Quality
Create your own online store for free.
Sign Up Now