ಪ್ರಾಕೃತ ಜಗದ್ವಲಯ (ಪ್ರಾಕೃತ-ಕನ್ನಡ-ಸಂಸ್ಕೃತ ಭಾಷೆಗಳ ಅನುಸಂಧಾನ)
ಪ್ರಾಕೃತ ಜಗದ್ವಲಯ (ಪ್ರಾಕೃತ-ಕನ್ನಡ-ಸಂಸ್ಕೃತ ಭಾಷೆಗಳ ಅನುಸಂಧಾನ)ಪ್ರಾಕೃತ ಜಗದ್ವಲಯ (ಪ್ರಾಕೃತ-ಕನ್ನಡ-ಸಂಸ್ಕೃತ ಭಾಷೆಗಳ ಅನುಸಂಧಾನ)
ಪ್ರಾಕೃತ ಜಗದ್ವಲಯ (ಪ್ರಾಕೃತ-ಕನ್ನಡ-ಸಂಸ್ಕೃತ ಭಾಷೆಗಳ ಅನುಸಂಧಾನ)
Share:
₹225
Ships within 3 days
SKU :
99
Description

ಲೇಖಕರು: ಷ. ಶೆಟ್ಟರ್ ಬೆಲೆ: 250/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

ಪ್ರೊ ಷ. ಶಟ್ಟರ್ ಅವರ ಪರೋಕ್ಷ ವಿದ್ಯಾರ್ಥಿ ನಾನು.

ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಇವರು ಮೂಲತಃ ನನ್ನ ಜಿಲ್ಲೆಯ ಹಂಪಸಾಗರದವರು. ಇವರು ನನಗೆ ಹೆಚ್ಚು ಇಷ್ಟವಾಗಿದ್ದು ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಸಂಶೋಧಿತ ಲೇಖನದ ಮೂಲಕ.

ಆ ವಸ್ತುನಿಷ್ಠ ಲೇಖನ ಅಂಧಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಆ ಲೇಖನದಿಂದ ಪ್ರಭಾವಿತನಾದ ನಾನು ಡಾ ಶಟ್ಟರ್ ಅವರ ಬಹುತೇಕ ಸಂಶೋಧಿತ ಬರಹಗಳನ್ನು ಪರಾಯಣ ಮಾಡಿದ್ದೇನೆ, ಅವರ ಬಹು ಚರ್ಚಿತ ಕೃತಿಗಳಾದ ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ ಒಳಗೊಂಡಂತೆ ಹಲವು ಅಪೂರ್ವ ಕೃತಿಗಳನ್ನು ವ್ಯಾಸಪೀಠದಲ್ಲಿರಿಸಿ ಪಾರಾಯಣ ಮಾಡಿ ಬೆರಗಾಗಿದ್ದೇನೆ.

ನನ್ನ ಭಾಷೆ, ಭಾಷೆಯ ಜೀವನಾಡಿಯಾದ ಲಿಪಿಸೌಕರ್ಯ, ಈ ಅನ್ವೇಷಣೆ ದ್ವಾರ ಆಯಾ ಕಾಲಘಟ್ಟದ ಹೊಳವುಗಳು ಮತ್ತು ಸಾಮಾಜಿಕ ಜೀವನ ಶೈಲಿ ಇವೇ ಮೊದಲಾದ ಪ್ರಥಮ ಸುಳಿವುಗಳನ್ನು ಇವರ ಕೃತಿಗಳ ಮೂಲಕ ಗ್ರಹಿಸಿದ್ದೇನೆ. ಇವರ ಸಾರ್ವಕಾಲಿಕ ಶ್ರೇಷ್ಠ ಕೃತಿ ಹಳಗನ್ನಡ ಲಿಪಿ: ಲಿಪಿಕಾರ: ಲಿಪಿ ವ್ಯವಸಾಯ ಈ ಮಹತ್ಕೃತಿ ಪಾರಾಯಣದಿಂದ ನನ್ನ ಅರಿವನ್ನು ವೃದ್ಧಿಸಿಕೊಂಡಿರುವೆನು. ಅಲ್ಲದೆ ಈ ಕೃತಿಯ ಅಂಬ್ಯಾಸಾಡರ್ ಸಹ ನಾನು.

ವಿಶ್ವಕರ್ಮರ ಬೈಬಲ್ ಈ ಮಹಾಗ್ರಂಥ. ಈ ಕೃತಿಯ ಅಧ್ಯಯನದ ಫಲಶೃತಿ ಎಂದರೆ ನಾನು ಕರ್ನಾಟಕದಲ್ಲಿನ ಬಹುಪಾಲು ಅಶೋಕನ ಶಾಸನಗಳನ್ನು ದರ್ಶಿಸಿದ್ದು, ಅವೆಲ್ಲವುಗಳ ಕುರಿತು ಕೂಲಂಕಷ ಅಧ್ಯಯನ ಮಾಡಿದ್ದು ನನ್ನ ಸೌಭಾಗ್ಯ. ಈ ಮಹಾನ್ ಇತಿಹಾಸ ತಜ್ಞ ಸೃಜಿಸಿದ ಕೃತಿಗಳ ಪ್ರಥಮ ಅನ್ವೇಷಕನಾಗಿದ್ದೇನೆ. ಶ್ರವಣ ಬೆಳಗೊಳದಲ್ಲಿ ಹಳಗನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಅದರ ಸರ್ವಾಧ್ಯಕ್ಷರನ್ನಾಗಿ ಶ್ರೀಯುತ ಡಾ ಷ ಶಟ್ಟರ್ ಅವರನ್ನು ಆಯ್ಕೆ ಮಾಡಿದ್ದು, ಅಧ್ಯಕ್ಷರು ಒಂದು ತಾಸು ಕಾಲ ವಿದ್ವತ್ ಪೂರ್ಣ ಉಪನ್ಯಾಸ ದಾಸೋಹ ಮಾಡಿದ್ದು ಅವಿಸ್ಮರಣೀಯ.

ಅದೇ ಸಂರ್ಭದಲ್ಲಿ ಅವರ ಇನ್ನೊಂದು ಮಹತ್ಕೃತಿ ಪ್ರಾಕೃತಿಕ ಜಗದ್ವಲಯ ಬಿಡುಗಡೆ ಆಯಿತು. ಡಾ ಕೆ ವಿ ತಿರುಮಲೇಶ್ ಅವರ ವಿದ್ವಪೂರ್ಣ ಮುನ್ನುಡಿ ಕೃತಿಗೆ ಬೌದ್ಧಿಕ ಪ್ರವೇಶ ಕಲ್ಪಿಸಿತು. ಷ ಶಟ್ಟರ್ ಒಂದೇ ಸಮನೆ ನನ್ನನ್ನು ಕ್ರಿಸ್ತಪೂರ್ವಕ್ಕೆ ಕರೆದೊಯ್ದಿದ್ದಾರೆ, ಅಶೋಕ, ಕಾನಿಷ್ಕರಂಥ ಲಿಪಿ ಕೃಷಿಕರನ್ನು ಸಂಗಾತಿಗಳನ್ನಾಗಿಸಿದ್ದಾರೆ. ತಮ್ಮ ಅರಣ್ಯಪರ್ವದ ತಾಣಗಳಲ್ಲಿ ನಮ್ಮನ್ನು ಅಲೆದಾಡಿಸಿದ್ದಾರೆ,

ಹಲವು ಕಾರಣಗಳಿಗಾಗಿ ಪ್ರಾಕೃತ ಜಗದ್ವಲಯ ಕನ್ನಡ ಸಾರ್ವತಲೋಕದ ಅಪೂರ್ವ ಕೃತಿ. ಇದನ್ನು ಪ್ರಕಟಿಸಿ ನಮ್ಮೆಲ್ಲರ ಅಂತಃಕರಣ ಸೂರೆಗೊಂಡಿರುವ ಅಭಿನವದ ಪ್ರಕಾಶಕ ರವಿ, ಚಂದ್ರಿಕಾ ನಿಜಕ್ಕೂ ಗ್ರೇಟ್.

-ಕುಂ. ವೀರಭದ್ರಪ್ಪ (ಕೃಪೆ: ಅವಧಿ)

ಅಭಿನವ24 products on store
Payment types
Create your own online store for free.
Sign Up Now