ಬೆಂಕಿಯ ನೆನಪು
ಬೆಂಕಿಯ ನೆನಪು
ಬೆಂಕಿಯ ನೆನಪು
Share:
₹67.50
Ships within 3 days
SKU :
99
Description

ಮೂಲ: ಎಡುವರ್ಡೋ ಗೆಲಿಯಾನೋ ಕನ್ನಡಕ್ಕೆ: ಕೆ.ಪಿ. ಸುರೇಶ ಬೆಲೆ: 75/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು. ................ ಯೂರೋಪ್‍ನ ಜ್ಞಾನಯುಗ ಆ ಖಂಡಕ್ಕೆ ತಂದ ಸೌಭಾಗ್ಯ ಏನೇ ಇರಲಿ, ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ದೇಶಗಳಿಗೆ ಅದರ ಬಳುವಳಿ -ವಸಹತುಶಾಹಿ, ಬಂದೂಕು, ಬೈಬಲ್ಲು ಮತ್ತು ತಕ್ಕಡಿಗಳ ಜೊತೆ ಜಹಜುಗಳಲ್ಲಿ ಬಂದಿಳಿದು ಆಳಿದ ಬಿಳಿಯರು ಈ ದೇಶಗಳಲ್ಲಿ ನಡೆಸಿದ ಜೀವಹಿಂಸೆ ಮತ್ತು ಪರಂಗಿ ರೋಗಗಳು... ಯಾವಾಗಲೂ ಚರಿತ್ರೆಯನ್ನು ಬರೆಯುವವರು ಗೆದ್ದ ಜನ. ಸೋತವರಿಗೆ ಚರಿತ್ರೆಯಿಲ್ಲ. ಆದರೆ ಗೆಲಿಯಾನೋ ಇಲ್ಲಿ, ಸೋಲೊಪ್ಪಿಕೊಳ್ಳದೆ ಹೋರಾಟದಲ್ಲಿ ತೊಡಗಿದವರ ಚರಿತ್ರೆಯನ್ನು ನಿರೂಪಿಸುತ್ತಿದ್ದಾನೆ. ಅಧಿಕೃತ ಚರಿತ್ರೆಗೆ ಇದು ಪರ್ಯಾಯ ಚರಿತ್ರೆ. ಈ ಚರಿತ್ರೆ ಆಳುವವರ ಹಿಂಸೆಯ ಕಥನವನ್ನಷ್ಟೇ ಅಲ್ಲ; ತಮ್ಮ ದುಃಖ ದುಮ್ಮಾನಗಳ ನಡುವೆಯೇ ಜನ ಕನಸು ಕಾಣುತ್ತಾರೆ, ಪ್ರೀತಿಸುತ್ತಾರೆ, ಸಿನಿಮಾ, ಪುಟ್‍ಬಾಲ್‍ಗಳಲ್ಲಿ ಜಗತ್ತನ್ನೇ ಮರೆಯುತ್ತಾರೆ. ದಕ್ಷಿಣ ಅಮೆರಿಕದ ಜನತೆಯ ಜೀವನೋತ್ಸಾಹವನ್ನು ತುಳಿದುಹಾಕಲು ಅಮೆರಿಕದ ಸಾಮ್ರಾಜ್ಯಶಾಹಿಗೂ ಸಾಧ್ಯವಿಲ್ಲ. ಗೆಲಿಯಾನೋ ಹೇಳುತ್ತಿರುವುದು ಜನಸಾಮಾನ್ಯರ ಧೀರೋದಾತ್ತ ಚರಿತ್ರೆಯನ್ನು. ಮಾರ್ಕ್ವೆಜ್ ಮತ್ತು ನೆರುಡಾರಿಗೆ ಹೇಗೋ ಗೆಲಿಯಾನೋಗೂ ಇಡಿಯ ದಕ್ಷಿಣ ಅಮೆರಿಕ ಖಂಡವೇ ಆತನ ದೇಶ. ಗೆಲಿಯಾನೋ ಬಣ್ಣಿಸುವ ದಕ್ಷಿಣ ಅಮೆರಿಕದ ಬದುಕಿನ ಈ ತುಣುಕುಗಳು ಏಕಕಾಲಕ್ಕೆ ವರದಿಯೂ, ಕಥನವೂ, ರೂಪಕವೂ ಆಗಿವೆ. ಗೆಳೆಯ ಸುರೇಶ ಅವರ ಅನುವಾದ, ಮೂಲದ ಉತ್ಕಟತೆ ಮತ್ತು ಲಯಗಳನ್ನು ಚೂರೂ ವ್ಯತ್ಯಯವಾಗದಂತೆ ಉಳಿಸಿಕೊಂಡಿದೆ. - ಜಿ. ರಾಜಶೇಖರ

ಅಭಿನವ24 products on store
Payment types
Create your own online store for free.
Sign Up Now