ವಿ.ಕೃ. ಗೋಕಾಕ್ (ಜೀವನ ದರ್ಶನ)
ವಿ.ಕೃ. ಗೋಕಾಕ್ (ಜೀವನ ದರ್ಶನ)
ವಿ.ಕೃ. ಗೋಕಾಕ್ (ಜೀವನ ದರ್ಶನ)
Share:
₹25
Ships within 3 days
SKU :
100
Description

ಲೇಖಕರು: ಎನ್ಕೆ ಪ್ರಕಾಶನ: ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್, ಬೆಂಗಳೂರು ಪುಟಗಳು: 32, ಬೆಲೆ: 25/- ......... ಡಾ. ವಿನಾಯಕ ಕೃಷ್ಣ ಗೋಕಾಕ್! ಹೆಸರು ನೆನೆದೊಡನೆಯೆ ನಮ್ಮ ಕಣ್ಣಮುಂದೆ ನಿಲ್ಲುವ ಚಿತ್ರ ಅಂತರಾಷ್ಟ್ರೀಯ ಖ್ಯಾತಿಯ ಎತ್ತರದ ವ್ಯಕ್ತಿ; ಕನ್ನಡಕದ ಹಿಂದಿನ ಆಳವಾದ ಒಳನೋಟದ ಕಣ್ಣು, ಗಂಭೀರ ಧ್ವನಿ, ಗಂಭೀರ ನಿಲುವು. ಎಪ್ಪತ್ತೇಳರ ಈ ಪರಿಪಕ್ವ ವ್ಯಕ್ತಿತ್ವದ ಹಿಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ಆಡಳಿತ ನಿರ್ವಹಿಸಿದ ಕುಲಪತಿಯ ವರ್ಚಸ್ಸಿದೆ, ಶಿಕ್ಷಣವೇತ್ತನ ವೈಚಾರಿಕ ಪ್ರಗಲ್ಭತೆ ಇದೆ, ಪ್ರಾಧ್ಯಾಪಕನ ಪ್ರತಿಭೆ ಇದೆ, ಅನುಭವ ತಪಸ್ಸಿದೆ, ಅನುಭಾವ ಸಿದ್ಧಿಯಿದೆ, ಪ್ರಪಂಚ ಪಯಣಿಗ’ನ ವಿಶಾಲ ಜ್ಞಾನವಿದೆ ಬೌದ್ಧಿಕ ಔನ್ನತ್ಯವಿದೆ, ಸೃಜನಶೀಲ ಕವಿಯ ಅಂತಃಸ್ಫುರಣವಿದೆ, ಯೋಗಿಯ ನಿಷ್ಕಾಮ ಬುದ್ಧಿಯಿದೆ.ಸಂಕೀರ್ಣತೆ’ ವಿನಾಯಕರ ಬದುಕು-ಬರಹಗಳ ಗುರುತು- ಗುರಿಗಳೆನ್ನಬಹುದು. ನಾನೊಬ್ಬ ಸಂಕೀರ್ಣತೆಯ ಉಪಾಸಕ’ ಎಂದೂ ಅವರು ಹೇಳುವುದುಂಟು. ಬದುಕಿನ ತಿರುವುಗಳಲ್ಲಿ ಏಕಕಾಲಕ್ಕೆ ಸುಖ-ದುಃಖಗಳ ಪರಮಾವಧಿಯನ್ನೆ ಅನುಭವಿಸುತ್ತ ಸಂಕೀರ್ಣತೆಯ ಮಾರ್ಗದಲ್ಲಿ ಬಾಳ ಕಡಲನ್ನು ಪಯಣಿಸಿದೆ ಅವರ ಜೀವನನೌಕೆ. ಆಕ್ಸ್ಫರ್ಡ್ ಪದವಿ ಪಡೆಯಲೆಂದು, ಶೆಲ್ಲಿಯ ನಾಡ ನೆಲದ ಹಿಡಿಮಣ್ಣು ತರಲೆಂದು ಹಡಗನ್ನೇರಿದರು. ಆಕ್ಸ್ಫರ್ಡ್ ಬಿ.ಎ. ಪದವಿ ಪರೀಕ್ಷೆಗೆ ಕುಳಿತರು. ಪ್ರಥಮ ತರಗತಿಯ ಯಶಸ್ಸು ಪಡೆಯುವ ಭರವಸೆ. ಇನ್ನೂ ಮೌಖಿಕ ಪರೀಕ್ಷೆ ಆಗುವುದಿತ್ತು, ತತ್ಪೂರ್ವದಲ್ಲಿ ಕಾಂಟಿನೆಂಟಲ್ ಪ್ರವಾಸಕ್ಕೆಂದು ಹೊರಟರೆ ದಾರಿಯಲ್ಲಿ (ಎಡಿನ್ಬರೋದಲ್ಲಿ) ತೀವ್ರತರವಾದ ಕರುಳು ಬೇನೆಯಿಂದ ಬಳಲುತ್ತ ಶೀಘ್ರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ಜೀವ-ಸಾವಿನ ಜೋಕಾಲಿಯಲ್ಲಿ ದಐವದ ಗೊಂಬೆಯಾಗಿ, ಸರಿ ಹಾಗಾದರೆವೈವಾ’ ತಪ್ಪಿ ಹೋಯಿತು, ಆಕ್ಸ್ಫರ್ಡ್ ಪ್ರಥಮ ವರ್ಗದ ಆಸೆ ಹುಸಿಯಾಯಿತು ಎಂದು ಕಳವಳಿಸುತ್ತಿರುವಾಗ ಅವರ ಈ ದುರ್ದೈವದ ಪರಿಸ್ಥಿತಿಯನ್ನರಿತ ಪರೀಕ್ಷಕರು ವೈವಾ’ ಇಲ್ಲದೇನೆ ಗೋಕಾಕರ ಲಿಖಿತ ಪರೀಕ್ಷೆಯ ಉಜ್ವಲ Performanceನಿಂದ ಪರಮ ಸಂತುಷ್ಟರಾಗಿ ಅವರಿಗೆ ಪ್ರಥಮ ವರ್ಗದ ತೇರ್ಗಡೆಯನ್ನು ಕೊಟ್ಟು ಅವರ ವಿದ್ವತ್ತೆಯನ್ನು ಗುರುತಿಸಿದರು (1938). ಗುಣಕ್ಕೆ ಮತ್ಸರವಿಲ್ಲ, ಪ್ರೊತ್ಸಾಹವುಂಟು ವಿದ್ಯಾಪಕ್ಷಪಾತಿಗಳಲ್ಲಿ. ಇದೂ ದೈವೀಕೃಪೆಯೇ. ವಿನಾಯಕರ ಬದುಕಿನ ತಿರುವುಗಳಲ್ಲಿ ಅದೇ ಕಾಲಕ್ಕೆ ಪೌರುಷ, ಸುದೈವ, ದುರ್ದೈವಗಳ ಮೇಲಾಟಗಳ ಒಂದು ಸಂಕೀರ್ಣ ಸಂಭೂತಿಯನ್ನು ನಾವು ಗುರುತಿಸಬಹುದಾಗಿದೆ.Complexity is of the essence of life’ ಎಂದು ಒಂದೆಡೆ ಗೋಕಾಕರು ಹೇಳಿದ್ದಾರೆ. --ಎನ್ಕೆ

ಅಭಿನವ24 products on store
Payment types
Create your own online store for free.
Sign Up Now