ಕಲಿಗುಲ (ನಾಟಕ)
ಕಲಿಗುಲ (ನಾಟಕ)
ಕಲಿಗುಲ (ನಾಟಕ)
Share:
₹90
Ships within 7 days
SKU :
0
Description

ಲೇಖಕರು: ಕೆ.ವಿ. ತಿರುಮಲೇಶ್ ಬೆಲೆ: 100/- ರಿಯಾಯಿತಿ:10% ಪ್ರಕಾಶನ: ಅಭಿನವ, ಬೆಂಗಳೂರು

‘ಕಲಿಗುಲ’ ನನ್ನ ಎರಡನೇ ನಾಟಕ; ಮೊದಲ ನಾಟಕ ‘ಟೈಬೀರಿಯಸ್’ ಬರೆದ ಬೆನ್ನಲ್ಲೇ ನಾನಿದನ್ನು ಬರೆದೆ. ಕಲಿಗುಲನ (ಕ್ರಿ.ಶ. 12-ಕ್ರಿ.ಶ. 41) ಹೆಸರು ಗೈಯುಸ್ ಜೂಲಿಯಸ್ ಸೀಸರ್ ಆಗಸ್ಟಸ್ ಜರ್ಮಾನಿಕಸ್ ಎಂಬುದಾಗಿ. ಕಲಿಗುಲ’ ಎನ್ನುವುದು ಒಂದು ಅಡ್ಡ ಹೆಸರು. ಅವನ ತಂದೆ ಜರ್ಮಾನಿಕಸ್ ರೋಮನ್ ಸೇನಾಧಿಕಾರಿಯಾಗಿ ಹೊರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವಾಗ ಕಲಿಗುಲ ಇನ್ನೂ ಪುಟ್ಟ ಹುಡುಗ, ಸೈನಕ ಶಿಬಿರಗಳಲ್ಲಿ ಓಡಾಡಿಕೊಂಡಿದ್ದವ. ಅವನ ಚಿಕ್ಕ ಗಾತ್ರಕ್ಕೆ ಸರಿಯಾಗಿ ಅವನಿಗೊಂದು ಸೈನಿಕ ಸಮವಸ್ತ್ರವನ್ನು ತಯಾರಿಸಿಕೊಡಲಾಗಿತ್ತು. ಅವನಿಗೆ ಒಂದು ಜೊತೆ ಸೈನಿಕ ಬೂಟುಗಳೂ ಇದ್ದವು.ಕಲಿಗುಲ’ ಎಂದರೆ ಪುಟ್ಟ ಪಾಪಾಸು (ಬೂಟು) ಎಂದರ್ಥ—ಈ ಅಡ್ಡ ಹೆಸರನ್ನು ಪ್ರೀತಿಯಿಂದ ಅವನಿಗೆ ಇಟ್ಟವರು ಬಹುಶಃ ಸೈನಿಕರೇ. ಮುಂದೆ ಅವನು ಇತಿಹಾಸದಲ್ಲಿ (ಕು)ಪ್ರಸಿದ್ಧನಾದುದು ಇದೇ ಹೆಸರಿನಿಂದ, ಕಲಿಗುಲ ತಾನು ಬೆಳೆದ ಮೇಲೆ ಸ್ವತಃ ಈ ಹೆಸರನ್ನು ಇಷ್ಟಪಡದೆ ಇದ್ದರೂ. ಕಲಿಗುಲ ಟೈಬೀರಿಯಸ್‍ನ ಅನಂತರ ರೋಮನ್ ಸಾಮ್ರಾಟನಾದವನು— ರೋಮನ್ ಸಾಮ್ರಾಟರಲ್ಲಿ ಮೂರನೆಯವನು. ಟೈಬೀರಿಯಸ್‍ನ ಸಾವಿನಲ್ಲಿ ಇವನ ಕೈವಾಡ ಇರಬಹುದು ಎಂಬ ಶಂಕೆಯಿದೆ. ಕಲಿಗುಲ ಟೈಬೀರಿಯಸ್‍ಗೆ ಸಂಬಂಧಿಯಾಗಬೇಕು. ಕಲಿಗುಲನ ತಂದೆ ಜರ್ಮಾನಿಕಸ್ ಟೈಬೀರಿಯಸ್‍ನ ತಮ್ಮನ ಮಗ. ಆಗಸ್ಟಸ್ ಟೈಬೀರಿಯಸ್‍ನ್ನ ದತ್ತು ಮಗನಾಗಿ ಸ್ವೀಕರಿಸಿದ್ದಾಗ, ಟೈಬೀರಿಯಸ್ ಜರ್ಮಾನಿಕಸ್‍ನನ್ನು ದತ್ತು ಮಗನಾಗಿ ಸ್ವೀಕರಿಸಬೇಕೆಂಬ ಶರತ್ತು ಹಾಕಿದ್ದ. ಅಂತೆಯೇ ಟೈಬೀರಿಯಸ್‍ನ ಅನಂತರ ರಾಜ್ಯಾಧಿಕಾರ ಜರ್ಮಾನಿಕಸ್‍ಗೆ ಹೋಗಬೇಕಾಗಿತ್ತು. ಆದರೆ ಜರ್ಮಾನಿಕಸ್ ಆಂಟಿಯೋಕ್‍ನಲ್ಲಿ ಕುಟುಂಬ ಸಮೇತ ಇದ್ದ ಸಮಯದಲ್ಲಿ ಆಕಸ್ಮಿಕವಾಗಿ ಮರಣ ಹೊಂದುತ್ತಾನೆ. ಆಗ ಅವನ ಪತ್ನಿ ಅಗ್ರಿಪೀನಾ ತನ್ನ ಆರು ಜನ ಮಕ್ಕಳೊಂದಿಗೆ ರೋಮಿಗೆ ಹಿಂದಿರುಗಿ, ತನ್ನ ಮಕ್ಕಳ ಹಕ್ಕುಗಳಿಗೋಸ್ಕರ ಟೈಬೀರಿಯಸ್‍ನ ವಿರುದ್ಧ ಜಗಳ ತೆಗೆಯುತ್ತಾಳೆ. ಪರಿಣಾಮವಾಗಿ ಚಿಕ್ಕವನಾದ ಕಲಿಗುಲನ ಹೊರತುಪಡಿಸಿ ಅವಳ ಉಳಿದ ಗಂಡುಮಕ್ಕಳು ಅನುಮಾನಾಸ್ಪದ ಸಾವಿಗೆ ಗುರಿಯಾಗುತ್ತಾರೆ. ಕಲಿಗುಲನಿಗೆ ಸಂಬಂಧಿಸಿದ ಕಾಲರೇಖೆ ಈ ರೀತಿ ಇದೆ (ಅರಿಕೆಯಿಂದ) -ಕೆ. ವಿ. ತಿರುಮಲೇಶ್

ಅಭಿನವ24 products on store
Payment types
Create your own online store for free.
Sign Up Now