ಸಾಂಸ್ಕೃತಿಕ ಅಧ್ಯಯನ
ಸಾಂಸ್ಕೃತಿಕ ಅಧ್ಯಯನ
ಸಾಂಸ್ಕೃತಿಕ ಅಧ್ಯಯನ
Share:
₹180
Ships within 3 days
SKU :
95
Description

ಲೇಖಕರು: ರಹಮತ್ ತರೀಕೆರೆ ಬೆಲೆ: 200/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

'ಅಭಿನವ'ದಿಂದ ರಹಮತ್ ತರೀಕೆರೆ ಅವರ 'ಸಾಂಸ್ಕೃತಿಕ ಅಧ್ಯಯನ' ಪುಸ್ತಕ ಪ್ರಕಟಗೊಂಡಿದೆ. ಲೇಖಕರೇ ಹೇಳವಂತೆ ಇದು ಮರುಮುದ್ರಣವಲ್ಲ ಮರುರಚನೆಗೊಂಡಿದ್ದು. ....................... ಈ ಪುಸ್ತಕದ ಉದ್ದೇಶ, ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನಗಳು ಉದ್ದಕ್ಕೂ ಹೇಗೆ ನಡೆದುಬಂದಿವೆ ಹಾಗೂ ಈಗ ಹೇಗೆ ಹೊಸ ಹೊಸ ತಿರುವು ಪಡೆದುಕೊಂಡು ನಡೆಯುತ್ತಿವೆ ಎಂಬ ಚರಿತ್ರೆಯನ್ನು ಸರಳವಾಗಿ ದಾಖಲಿಸುವುದೇ ಹೊರತು; ಯಾವುದಾದರೂ ಸಂಶೋಧನ ವಿಷಯ ಆರಿಸಿಕೊಂಡು ಸಾಂಸ್ಕೃತಿಕ ಅಧ್ಯಯನ ಹೇಗೆ ಮಾಡಬಹುದು ಎಂಬುದಕ್ಕೆ ಮಾದರಿಯನ್ನು ಮಂಡಿಸುವುದಲ್ಲ. ಇದೊಂದು ಮಾಹಿತಿ ಪ್ರಧಾನವಾದ ಪ್ರವೇಶಿಕೆ. ಇದನ್ನು ಬರೆಯುವಾಗ ನನ್ನ ಕಣ್ಮುಂದೆ ಇರುವವರು ಈ ಕ್ಷೇತ್ರದಲ್ಲಿ ಚಿಂತನೆ ಮತ್ತು ಅಧ್ಯಯನ ಮಾಡಿರುವ ವಿದ್ವಾಂಸರಲ್ಲ. ಬದಲಾಗಿ ಸಾಹಿತ್ಯ, ಭಾಷೆ, ಜಾನಪದ, ಚರಿತ್ರೆ, ಸಮಾಜಶಾಸ್ತ್ರಗಳಲ್ಲಿ ಅಧ್ಯಯನ ಮಾಡುವ ಮಾನವಿಕ ಹಾಗೂ ಸಮಾಜವಿಜ್ಞಾನದ ಪ್ರಾಥಮಿಕ ವಿದ್ಯಾರ್ಥಿಗಳು. ಮುಂದುವರೆದು ಕೆಲವಾದರೂ ಸಾಂಸ್ಕೃತಿಕ ಅಧ್ಯಯನ ಕೈಗೊಳ್ಳುವ ಹೊಸ ತಲೆಮಾರಿನ ಸಂಶೋಧಕರಿಗೆ, ಸಂಶೋಧನ ವಿಧಾನಗಳನ್ನು ಕಂಡುಕೊಳ್ಳುವ ಹೊತ್ತಲ್ಲಿ ಈ ಪುಸ್ತಿಕೆ ಉಪಯುಕ್ತವಾದೀತು ಎಂಬ ನಂಬಿಕೆಯಿದೆ. -ರಹಮತ್ ತರೀಕೆರೆ (ಅರಿಕೆಯಿಂದ)

ಅಭಿನವ24 products on store
Payment types
Create your own online store for free.
Sign Up Now