ವಾಸ್ತವತಾವಾದ
ವಾಸ್ತವತಾವಾದ
ವಾಸ್ತವತಾವಾದ
Share:
₹90
Ships within 3 days
SKU :
99
Description

ಲೇಖಕರು: ಟಿ.ಪಿ. ಅಶೋಕ ಬೆಲೆ: 100/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

ಟಿ. ಪಿ. ಅಶೋಕ ಅವರ 'ವಾಸ್ತವತಾವಾದ' ಪರಿಷ್ಕರಿಸಿ ಇನ್ನಷ್ಟು ಲೇಖನಗಳನ್ನ ಸೇರಿಸಿ ಅಭಿನವ ಪ್ರಕಟಿಸಿದೆ.

...ಈ ಪುಸ್ತಕವು ವಾಸ್ತವತಾವಾದ ಎಂಬ ಪರಿಕಲ್ಪನೆಯ ಹಿಂದಿನ ತಾತ್ವಿಕತೆಯನ್ನು ಪರಿಚಯಿಸುವುದರ ಜೊತೆಗೆ ಪಾಶ್ಚಾತ್ಯ ಮತ್ತು ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅದು ನಿರ್ವಹಣೆಗೊಂಡ ಸ್ಥೂಲ ಚಿತ್ರವೊಂದನ್ನು ನೀಡುವ ಉದ್ದೇಶವನ್ನು ಇಟ್ಟುಕೊಂಡಿದೆ. ಆಧುನಿಕ ಕನ್ನಡ ಸಾಹಿತ್ಯದ ಮೊದಲ ಮುಖ್ಯಕತೆ ಕಾದಂಬರಿಗಳು ವಾಸ್ತವತಾವಾದಕ್ಕೆ ಎದುರಾದ ಬಗೆಯನ್ನೂ, ಹಾಗೆ ಎದುರಾದಾಗ ಹುಟ್ಟಿದ ಸಮಸ್ಯೆಗಳನ್ನು ಪರಿಹರಿಸಿಕೊಂಡ ರೀತಿಯನ್ನೂ ಪುಸ್ತಕದ ಎರಡನೆಯ ಭಾಗದ ಲೇಖನಗಳು ವಿವರವಾಗಿ ಚರ್ಚಿಸುತ್ತವೆ. `ವಾಸ್ತವತಾವಾದ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಆಧುನಿಕ ಕಥನ ಸಾಹಿತ್ಯ ಬೆಳೆದುಬಂದ ರೀತಿಯನ್ನು ಹಲವು ಮುಖ್ಯ ಕೃತಿಗಳ ಪರಿಶೀಲನೆಯ ಮೂಲಕ ಕಟ್ಟಿಕೊಡುವ ಹಂಬಲದ ಈ ಪುಸ್ತಕವು ಸಾಹಿತ್ಯದ ಓದುಗರಿಗೆ, ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಸಂಶೋಧಕರಿಗೆ ಬೇರೆ ಬೇರೆ ಬಗೆಗಳಲ್ಲಿ ಉಪಯುಕ್ತವಾಗಬಹುದೆಂದು ನಾನು ಆಶಿಸಿದ್ದೇನೆ.

-ಟಿ.ಪಿ. ಅಶೋಕ

ಅಭಿನವ24 products on store
Payment types
Create your own online store for free.
Sign Up Now