ಕವನಗಳಲ್ಲಿ ಸಂಕೀರ್ಣತೆ
ಕವನಗಳಲ್ಲಿ ಸಂಕೀರ್ಣತೆ
ಕವನಗಳಲ್ಲಿ ಸಂಕೀರ್ಣತೆ
Share:
₹45
Ships within 3 days
SKU :
0
Description

ಲೇಖಕರು: ವಿ.ಕೃ. ಗೋಕಾಕ್ ಬೆಲೆ: 50/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ......................... ವಿ.ಕೃ. ಗೋಕಾಕ್ ಅವರ ಉಪನ್ಯಾಸದ ಶಿರೋನಾಮೆ ‘ಕವನಗಳಲ್ಲಿ ಸಂಕೀರ್ಣತೆ’ ಬೇಂದ್ರೆಯವರ ‘ಓ ಹಾಡೆ’ ಕುವೆಂಪು ಅವರ ‘ಅಧಿದೇವತಾ ಆವಿರ್ಭೂತಿ’ ಮತ್ತು ಗೋಪಾಲಕೃಷ್ಣ ಅಡಿಗರ ‘ಭೂತ’ ಎಂಬ ಈ ಮೂರು ಕವನಗಳನ್ನಾಯ್ದುಕೊಂಡು, ಸಂಕೀರ್ಣತೆಯ ಸ್ವರೂಪವನ್ನು ಸಮರ್ಪಕವಾಗಿ ವಿವರಿಸಿದ್ದಾರೆ. ಕಾವ್ಯದ ವಿವಿಧ ಅಂಗಗಳಾದ ಭಾಷೆ, ಛಂದಸ್ಸು, ಅರ್ಥ, ಅಲಂಕಾರ, ಶಿಲ್ಪ ಭಾವ, ಜೀವನದರ್ಶನಗಳಲ್ಲಿ ಸಂಕೀರ್ಣತೆ ಕಾಣಿಸಿಕೊಳ್ಳುತ್ತದೆಂದೂ, ಅದು ಯಾವೊಂದು ಮಾರ್ಗದ ಸ್ವತ್ತಲ್ಲವೆಂದೂ ಸ್ಪಷ್ಟವಾಗಿ, ಸಂದೇಹದೂರವಾಗಿ ವಿವರಿಸಿದ್ದಾರೆ. ಪ್ರಾಯೋಗಿಕ ವಿಮರ್ಶೆಯಲ್ಲಿ ತೊಡಗಬೇಕೆನ್ನುವವರಿಗೆ ಈ ಕಿರುಹೊತ್ತಿಗೆ ಮಾರ್ಗದರ್ಶನವಾಗುತ್ತದೆಂದು ಧಾರಾಳವಾಗಿ ಹೇಳಬಹುದಾಗಿದೆ.

  • ದೇಜಗೌ (ಮುನ್ನುಡಿಯಿಂದ)
ಅಭಿನವ24 products on store
Payment types
Create your own online store for free.
Sign Up Now