ಮೋದಾಳಿ (ನಾಟಕ)
ಮೋದಾಳಿ (ನಾಟಕ)ಮೋದಾಳಿ (ನಾಟಕ)
ಮೋದಾಳಿ (ನಾಟಕ)
Share:
₹67.50
Ships within 3 days
SKU :
100
Description

ಲೇಖಕರು: ಪಿ. ಚಂದ್ರಿಕಾ ಬೆಲೆ: ೭೫/- ರಿಯಾಯಿತಿ -೧೦%

ಮೋದಾಳಿ, ನದಿಯ ಜೊತೆ ತನ್ನನ್ನು ಹೋಲಿಸಿಕೊಂಡು ಆಡುವ ಮಾತು ಒಂದು ನದಿಗೆ ಎರಡು ಸಲ ಕಾಲಿಡಲು ಸಾಧ್ಯವಿಲ್ಲ’ ಎಂಬ ಗ್ರೀಕ್ ತತ್ವಶಾಸ್ತ್ರಜ್ಞ ಹೆರಾಕ್ಲಿಟಸ್‍ನ ಹೇಳಿಕೆಯನ್ನು ನೆನಪಿಸುತ್ತದೆ. ಹೆರಾಕ್ಲಿಟಸ್‍ನ ಈ ಮಾತನ್ನು ಬೌದ್ಧ ಮಾಧ್ಯಮಿಕರು ಹೀಗೆ ಬಿಡಿಸಿ ಹೇಳುವುದರ ಮುಖಾಂತರ ಅದರ ಅರ್ಥವನ್ನು ವಿಸ್ತರಿಸಿದರು. 1. ಒಂದು ನದಿಗೆ ಎರಡು ಸಲ ಕಾಲಿಡಲು ಸಾಧ್ಯವಿಲ್ಲ. 2. ಹಾಗೆ ಕಾಲಿಟ್ಟ ಮನುಷ್ಯ ಒಬ್ಬನೇ ಅಲ್ಲ; ಬೇರೆ ಬೇರೆಯೂ ಅಲ್ಲ. 3. ಎರಡು ಸಲ ಕಾಲಿಟ್ಟ ನದಿ ಒಂದೇ ಅಲ್ಲ; ಬೇರೆ ಬೇರೆಯೂ ಅಲ್ಲ. 4. ಎರಡು ಸಲ ನದಿಗೆ ಕಾಲಿಟ್ಟಾಗ ಇದ್ದ ಪರಿಸ್ಥಿತಿ ಒಂದೇ ಅಲ್ಲ; ಬೇರೆ ಬೇರೆಯೂ ಅಲ್ಲ. 5. ಎರಡು ಸಲ ನದಿಗೆ ಕಾಲಿಟ್ಟಾಗ ಆದ ಪರಿಣಾಮ ಒಂದೇ ಅಲ್ಲ; ಬೇರೆ ಬೇರೆಯೂ ಅಲ್ಲ. ಸತತವಾಗಿ, ನಿರಂತರವಾಗಿ ಹರಿಯುವ ನದಿ, ತನ್ನ ಸುತ್ತಲಿನ ಸೀಮೆಯ ಎಲ್ಲ ವಿದ್ಯಮಾನಗಳಿಗೂ ಸಾಕ್ಷೀಭೂತಳಾಗಿ ಹರಿಯುವ ನದಿ, ಸಾತತ್ಯ ಮತ್ತು ಪರಿವರ್ತನಾಶೀಲತೆಗಳಿಗೆ ರೂಪಕವಾಗುವಂತೆ, ಈ ನಾಟಕದಮೋದಾಳಿ’ ಹೆಣ್ಣು ಅನುಭವಿಸುವ ಒಂಟಿತನ ಹಾಗೂ ನೋವಿನ ಸಾತತ್ಯ ಮತ್ತು ಅವು ವ್ಯಕ್ತಗೊಳ್ಳುವ ವಿಧಾನಗಳಲ್ಲಿ ಕಾಲದಿಂದ ಕಾಲಕ್ಕೆ ಆಗುವ ಪರಿವರ್ತನೆ-ಈ ಪ್ರಕ್ರಿಯೆಗೆ ಒಂದು ಸಶಕ್ತ ರೂಪಕವಾಗುತ್ತಾಳೆ. -ಜಿ. ರಾಜಶೇಖರ (ಮುನ್ನುಡಿಯಿಂದ)

ಅಭಿನವ24 products on store
Payment types
Create your own online store for free.
Sign Up Now