ಹಗಲಲ್ಲಿ ತೊಗಲಬಾವುಲಿ (ಕತೆಗಳು)
ಹಗಲಲ್ಲಿ ತೊಗಲಬಾವುಲಿ (ಕತೆಗಳು)
ಹಗಲಲ್ಲಿ ತೊಗಲಬಾವುಲಿ (ಕತೆಗಳು)
Share:
₹67.50
Ships within 3 days
SKU :
100
Description

ಲೇಖಕರು: ವಿ.ಕೃ. ಗೋಕಾಕ್ ಪ್ರಕಾಶನ: ಅಭಿನವ, ಬೆಂಗಳೂರು ಪುಟಗಳು: 92, ಬೆಲೆ: 75/- ರಿಯಾಯಿತಿ 10% ISBN 978-81-944761-3-9 .... ...ಪುಸ್ತಕ ನೋಡಿದಾಗ ಡಾ. ಕೆ. ಎಸ್. ರತ್ನಮ್ಮ ಅವರ ಹೆಸರು ಪರಿಚಿತ ಎಂದುಕೊಂಡೆ. ಹಿಂದೆ ಗೆಳೆಯ ಪಚ್ಚೆ ನಂಜುಂಡಸ್ವಾಮಿಯವರು ರತ್ನಮ್ಮ ಅವರ ಕೆಲವು ಪುಸ್ತಕಗಳನ್ನು ಕಳುಹಿಸಿ ಅವುಗಳನ್ನು ಮಾರಾಟ ಮಾಡಿಕೊಡಲು ಸಾಧ್ಯವೇ? ಎಂದು ಕೇಳಿದ್ದರು. ನನ್ನ ಪ್ರಯತ್ನ ಮೀರಿ ಶ್ರಮಿಸಿದರೂ ಅವರ ಪುಸ್ತಕಗಳನ್ನು ಸಂಪೂರ್ಣ ಮಾರಲು ಸಾಧ್ಯವಾಗಲಿಲ್ಲ. ಅವರು ಐದಾರು ವರ್ಷಗಳ ಹಿಂದೆ ಕ್ಯಾನ್ಸರ್‍ನಿಂದ ತೀರಿಕೊಂಡರೆಂಬ ಸುದ್ದಿಯನ್ನು ಕೇಳಿದೆ. ರತ್ನಮ್ಮನವರು, ರೈತ ಚೇತನ ಪೆÇ್ರ. ಎಂ. ಡಿ. ನಂಜುಂಡಸ್ವಾಮಿಯವರ ತಮ್ಮನ ಹೆಂಡತಿಯಂತೆ. ಅವರು ಮೈಸೂರಿನ ಮಲ್ಲಪ್ಪ ಮರಿಮಲ್ಲಪ್ಪ ಕಾಲೇಜಿನ ಪ್ರಾಂಶುಪಾಲರಾಗಿದ್ದರಂತೆ. ಸ್ವತಃ ಅವರೇ ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದರಂತೆ (ಈ ಹೊತ್ತಿಗೂ ಅವರ ಮನೆಯಲ್ಲಿ ಆ ಪುಸ್ತಕಗಳ ರಾಶಿ ಇದೆಯಂತೆ). ಸಿ. ಪಿ. ಕೆ. ಅವರ ಮಾರ್ಗದರ್ಶನದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಮಾಹಾಪ್ರಬಂಧ ಗೋಕಾಕರ ಗದ್ಯ ಸಾಹಿತ್ಯ’ 1997ರಲ್ಲಿ ಈ ಕೃತಿಯಾಗಿ ಪ್ರಕಟಗೊಂಡಿದೆ. ಅದರಲ್ಲಿ ಹಾ. ಮಾ. ನಾಯಕರ ಪತ್ರವೊಂದು ಮುನ್ನುಡಿಯ ರೂಪದಲ್ಲಿ ಪ್ರಕಟವಾಗಿದೆ.ವಿ. ಕೃ. ಗೋಕಾಕರು ನಾನು ಕಂಡ ಮನುಷ್ಯರಲ್ಲಿ ಅತ್ಯುತ್ತಮರಾದವರು. ಅವರು ನನ್ನಲ್ಲಿ ತೋರುತ್ತಿದ್ದ ಪ್ರೀತಿಯನ್ನು ನೆನಸಿಕೊಂಡರೆ ನನ್ನ ಕಣ್ಣುಗಳು ಈಗಲೂ ನೀರಾಡುತ್ತವೆ. ಅವರಿಗಿಂತಲೂ ಉತ್ತಮರಾದ ಸಾಹಿತಿಗಳು ಬಂದಾರು; ಆದರೆ ಅವರಿಗಿಂತಲೂ ಉತ್ತಮರಾದÀ ಮನುಷ್ಯರನ್ನು ನಾವು ಕಾಣಲಾರೆವು’. ಗೋಕಾಕರ ಸಣ್ಣಕಥೆಗಳ ಬಗೆಗೆ ಡಾ. ಕೆ. ಎಸ್. ರತ್ನಮ್ಮ ಅವರ ಅಭಿಪ್ರಾಯಗಳಿವು: ಗೋಕಾಕರ ಕಥೆಗಳು ಕೆಲವೇ ಆಗಿದ್ದರೂ ವಸ್ತು ವೈವಿಧ್ಯಮಯವಾಗಿದೆ. ಪ್ರತಿ ಕಥೆಯಲ್ಲಿ ಸಾವಿನ ಸನ್ನಿವೇಶಗಳಿವೆ. ವೈಯಕ್ತಿಕ ಜೀವನದ ಘಟನೆ, ಅನುಭವದ ಮೂಲಕ ಮಾನವ ಬದುಕಿನ ಅಸಹಾಯಕತೆ, ಕಲ್ಪಕತೆಗಳು ಸಂವೇದನಾಶೀಲ ಅಭಿವ್ಯಕ್ತ್ತಿಗೆ ಕಾರಣವಾಗಿವೆ... ಸಣ್ಣಕಥೆಗಳ ಭಾμÉÉಯಲ್ಲಿ ಭಾವುಕತೆ ಇದೆ. ಕಾವ್ಯಗುಣವೂ ಇಲ್ಲದೆಯಿಲ್ಲ... ಬದುಕಿನ ಬಗ್ಗೆ ಜಿಜ್ಞಾಸೆ, ಚಿಂತನೆಗಳಿಂದ ಕೂಡಿದ ತಾತ್ವಿಕತೆಯಿದೆ. ಸಣ್ಣಕಥೆಯ ಚೌಕಟ್ಟನ್ನು ಮೀರುವ ತಾತ್ವಿಕ ಚರ್ಚೆಗಳೇ ಕೆಲವೆಡೆ ಅಧಿಕವಾಗಿರುವುದುಂಟು. ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಚಿತ್ರಿಕ ಶಕ್ತಿ, ಭಾವಾಭಿವ್ಯಕ್ತಿ, ರಸಮಯ ಸನ್ನಿವೇಶಗಳ ನಿರೂಪಣೆಗಳು, ಕಲ್ಪನೆ ಮತ್ತ್ತು ವಾಸ್ತವಗಳ ನಿರೂಪಣೆ, ನಿರಾಯಾಸ ರಚನಾಕೌಶಲಗಳಿಂದ ಗಮನ ಸೆಳೆಯುವ ಈ ಕಥೆಗಳು ಗೋಕಾಕರ ಕಥನ ಪ್ರತಿಭೆಯ ದ್ಯೋತಕವಾಗಿವೆ. (ಪುಟ 354-358ಗೋಕಾಕರ ಗದ್ಯ ಸಾಹಿತ್ಯ’ (1997), ಪ್ರ: ಕಾವ್ಯಶ್ರೀ ಪ್ರಕಾಶನ, ಸರಸ್ವತಿಪುರಂ, ಮೈಸೂರು). ಈವರೆವಿಗೆ ಗೋಕಾಕರ ಎಲ್ಲ ಕೃತಿಗಳು ಲಭ್ಯವಿರಲಿಲ್ಲ; ಇನ್ನು ಅವರ ಬಗೆಗಿನ ಕೃತಿಗಳು ಎಲ್ಲಿ ಸಿಗಲು ಸಾಧ್ಯ? ವಿ. ಕೃ. ಗೋಕಾಕರಂಥ ಲೇಖಕರ ಕೃತಿಗಳು, ಅವರ ಸಾಹಿತ್ಯ ಮತ್ತು ಜೀವನ ದರ್ಶನವನ್ನು ಪರಿಚಯಿಸುವಂಥ ಕೃತಿಗಳು ಎಲ್ಲ ಕಾಲದಲ್ಲಿಯೂ ಸಿಗುವಂತಾಗಬೇಕು. -ನ. ರವಿಕುಮಾರ (ಪ್ರಕಾಶಕರ ಮಾತುಗಳಿಂದ)

ಅಭಿನವ24 products on store
Payment types
Create your own online store for free.
Sign Up Now