ಪಾ.ವೆಂ. ಹೇಳಿದ ಕಥೆ

Share
  • Ships within 3 days
₹ 135
Description

ಲೇಖಕರು: ರವಿ ಬೆಳಗೆರೆ
ಬೆಲೆ: 150/-
ರಿಯಾಯಿತಿ: 10%
ಪ್ರಕಾಶನ: ಅಭಿನವ, ಬೆಂಗಳೂರು

ಅಭಿನವದ ಮೊದಲ ಪುಸ್ತಕ ರವಿ ಬೆಳಗೆರೆ ಅವರ 'ಪಾ.ವೆಂ. ಹೇಳಿದ ಕಥೆ'...
ಈ ಕಥಾ ಸಂಕಲನದ ಮೂಲಕವೇ ಅಭಿನವ ಬೆಳಕು ಕಂಡಿದ್ದು. ಈಗ ಬೆಳಕಿಗೆ 25ವರ್ಷ. ಈ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಭಿನವಕ್ಕೆ 25ವರ್ಷ ತುಂಬಿರುವ ಸಂದರ್ಭದಲ್ಲಿ ಮೂರನೇ ಮುದ್ರಣ ಹೊರಬಂದಿದೆ ...

ನಾನು ಓದಿದ ಹತ್ತು ಬೆಸ್ಟೆಸ್ಟ್ ಕಥಾ ಸಂಕಲನಗಳನ್ನು ಪಟ್ಟಿ ಮಾಡಹೊರಟರೆ ಅದರಲ್ಲಿ " ಪಾವೆಂ ಹೇಳಿದ ಕಥೆಗಳು" ಕೂಡಾ ಇರುತ್ತದೆ.. ಅಂಬುಜಾ ಎಂಬ ಪಾತ್ರ ಕೇವಲ ಪಾತ್ರವಾಗಿಯಷ್ಟೇ ಉಳಿಯದೆ ಇವತ್ತಿಗೂ ಮತ್ತೆ ಮತ್ತೆ ನೆನಪಾಗುತ್ತಲೇ.. ಕಾಡುತ್ತಲೇ ಇರುವ.. ನಾನೆಲ್ಲೋ ನೋಡಿದ ಜೀವಂತ ವ್ಯಕ್ತಿಯಂತೆಯೇ ಅನ್ನಿಸುತ್ತಿರುತ್ತದೆ. ನಿನ್ನೆ ವಿಕಾಸ್ ನೇಗಿಲೋಣಿಯವರ ಸ್ಟೇಟಸ್ಸಿನಲ್ಲಿದ್ದ ಈ ಪುಸ್ತಕದ ಮುಖಪುಟ ಮತ್ತೆ ನಿನ್ನೆ ರಾತ್ರಿ ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಮಾಡಿತು.. ಮತ್ತೆ ಮರುಳಾದೆ..ಮತ್ಮತ್ತೆ ಓದಿದೆ.. ಚಂದ್ರಿಕಾ ಹೇಳಿದ್ದು ನಿಜ.. ರವಿ ಬೆಳಗೆರೆ ಬೇರೇನೂ ಬರೆಯಬಾರದಿತ್ತು.. ಕೇವಲ ಕಥೆಗಳನ್ನಷ್ಟೇ ಬರೆಯುತ್ತಿದ್ದಿದ್ದರೆ ಕನ್ನಡಕ್ಕೆ ಒಬ್ಬ ಅದ್ಭುತ ಕಥೆಗಾರ ಉಳಿದುಕೊಳ್ಳುತ್ತಿದ್ದ...
ಈಗ ಪುನರ್ಮುದ್ರಣ ಆಗಿರುವ, ಅಭಿನವ ಪ್ರಕಟಿಸಿರುವ ಈ ಪುಸ್ತಕವನ್ನು ಯಾರಾದರೂ ಓದಿರದಿದ್ದರೆ ದಯವಿಟ್ಟು ಓದಿ.. ಓದಿದ ನಂತರ ಮಾತು ಮರೆತು ಮೂಕರಾಗದಿದ್ದರೆ ಕೇಳಿ..

-ಮಾಲಿನಿ ಗುರುಪ್ರಸನ್ನ