ಕರ್ನಾಟಕದ ಸೂಫಿಗಳು
ಕರ್ನಾಟಕದ ಸೂಫಿಗಳು
ಕರ್ನಾಟಕದ ಸೂಫಿಗಳು
Share:
₹225
Ships within 3 days
SKU :
98
Description

ಲೇಖಕರು: ರಹಮತ್ ತರೀಕೆರೆ ಬೆಲೆ: 250/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ............................ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ......................... ಎಂಥ ಅದ್ಭುತವಾದ ಹಾಗೂ ಅಪರಿಚಿತವಾದ ಅನುಭವ ಪ್ರಪಂಚವನ್ನು ಅನಾವರಣಗೊಳಿಸಿದ್ದೀರಿ! ಕರ್ನಾಟಕದ ಸೂಫಿಸಂತರು, ಅನುಭಾವಿಗಳಾದ ತತ್ವಪದಕಾರರು ನಿರ್ಮಿಸಿದ ಧರ್ಮ ಸಾಮರಸ್ಯದ ಆಕೃತಿಗಳು. ಧಾರ್ಮಿಕ ಮೂಲಭೂತವಾದಿಗಳಿಂದ ಛಿದ್ರಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಿಮ್ಮ ಈ ಕೃತಿ ಹಾಗೂ ಅದರೊಳಗಿನ ವೈಚಾರಿಕತೆಗಳು, ಖಂಡಿತವಾಗಿಯೂ ಪುನರಾಲೋಚನೆಗೆ ಎಲ್ಲರನ್ನೂ ತೊಡಗಿಸಬಲ್ಲವು- ಜಿ.ಎಸ್.ಶಿವರುದ್ರಪ್ಪ

ಕನ್ನಡÀದ ಬಹುಕಾಲದ ಅಗತ್ಯವೊಂದು ನೀಗಿತು ಎಂದು ನನಗೆ ಮನವರಿಕೆಯಾಗಿ ಹೋಯಿತು- ಜಿ. ರಾಜಶೇಖರ

ಕರ್ನಾಟಕದ ಸಂಸ್ಕøತಿಗೆ ಸೂಫಿ ಪರಂಪರೆ ನಿಡಿರುವ ಮಹತ್ವದ ಕೊಡುಗೆಯ ಬಗ್ಗೆ ಈವರೆಗೆ ಬಂದಿರುವ ಅಧ್ಯಯನಗಳು ತುಂಬಾ ವಿರಳ. ಕನ್ನಡ ಸಾಂಸ್ಕøತಿಕ ಅಧ್ಯಯನಗಳಲ್ಲಿ ಈವರೆವಿಗಿದ್ದ ಒಂದು ದೊಡ್ಡ ಖಾಲಿ ಜಾಗವನ್ನು ಈ ಕೃತಿ ತುಂಬಿಕೊಟ್ಟಿದೆ- ಎಚ್.ಎಸ್. ಶಿವಪ್ರಕಾಶ್

ಕರ್ನಾಟಕದ ಜನಪರ ಸಂಸ್ಕøತಿಗಳ ನೆಲೆಗಳನ್ನು ಶೋಧಿಸುವವರು, ವಚನಕಾರರು, ಭಕ್ತಿಪಂಥ ಎಂದು ಮಾತ್ರ ಉಲ್ಲೇಖಿಸದೆ, ಸೂಫಿಪಂಥ ಎಂದು ಕೂಡ ಪರಿಗಣಿಸುವಂತಹ ವಾತಾವರಣ ನಿರ್ಮಾಣಕ್ಕೆ ಈ ಕೃತಿ ಅಗತ್ಯ ತಳಹದಿಯನ್ನೊದಗಿಸಿದೆ- ಬಂಜಗೆರೆ ಜಯಪ್ರಕಾಶ

ಕರ್ನಾಟಕದ ಸೂಫಿಗಳು, ನನ್ನ ಗಜಲ್ ಅಭ್ಯಾಸಕ್ಕೆ ತುಂಬ ಸಹಕಾರಿಯಾಗಿದೆ- ಶಾಂತರಸ

ಎಷ್ಟು ಚೆನ್ನಾಗಿ ಬರೆದಿದ್ದೀರಿ! ಇಟ್ ಈಜ್ ಎ ಗ್ರೇಟ್‍ಬುಕ್- ರಾಮಚಂದ್ರ ದೇವ

`ಕರ್ನಾಟಕದ ಸೂಫಿಗಳು’ ಕೃತಿಗೆ ಕನ್ನಡದ ಚಿಂತನಾಕ್ರಮವನ್ನು ಬದಲಿಸುವ, ಕನಿಷ್ಠ ಗಾಢವಾಗಿ ಪ್ರಭಾವಿಸುವ ಶಕ್ತಿಯಿದೆÉ- ಪುರುಷೋತ್ತಮ ಬಿಳಿಮಲೆ

ಹೃದಯಕ್ಕೆ ಧಗ್ಗನೆ ಬೆಳಕು ಹತ್ತಿಸಿ ಚಿಂತನೆಯ ಪರಿಚಲನೆಯನ್ನು ತೀಕ್ಷ್ಣಗೊಳಿಸುವ ಧಾತು! ಬಾಯಿಮಾತಿನ ಬಲೆಯಲ್ಲಿ ಗುದಿಮುರಿಗೆ ಹಾಕಿಕೊಂಡು ಬಿದ್ದಿದ್ದ ಸತ್ಯಕ್ಕೆ ಜೀವಕೊಡುವ ಸಾಹಸದ ಕೃತಿ- ಎಸ್.ಜಿ.ಸಿದ್ಧರಾಮಯ್ಯ

ಅಭಿನವ24 products on store
Payment types
Create your own online store for free.
Sign Up Now