ಸೋಮನಾಥಪುರ
ಸೋಮನಾಥಪುರ
ಸೋಮನಾಥಪುರ
Share:
₹135
Ships within 3 days
SKU :
99
Description

ಲೇಖಕರು: ಷ. ಶೆಟ್ಟರ್ ಬೆಲೆ: 150/- ಪುಟಗಳು: 178 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ............... ಪ್ರೌಢ ಓದುಗ ಅಥವ ಸಂದರ್ಶಕ ಸೋಮನಾಥಪುರದ ಬಗ್ಗೆ ತಿಳಿದುಕೊಳ್ಳಲು ಬೇಕಾದ ಮಾಹಿತಿಗಳನ್ನು ಒದಗಿಸುವುದು ಈ ಗ್ರಂಥದ ಉದ್ದೇಶ. ಹೊಯ್ಸಳರ ಮತ್ತು ಅವರ ದೇವಾಲಯಗಳ ಪ್ರಸ್ತಾವನೆಯಿಂದ ಪ್ರಾರಂಭವಾಗಿ, ಇಲ್ಲಿಯ ದೇವಾಲಯಗಳ ಇತಿಹಾಸ, ಐತಿಹ್ಯ, ಪೋಷಕ, ವಾಸ್ತು-ಶಿಲ್ಪಿ ಮುಂತಾದವನ್ನು ಚರ್ಚಿಸುತ್ತಾ ಮುಂದುವರಿದು ವಾಸ್ತು, ಶಿಲ್ಪ, ಅರ್ಚನೆ, ಆರ್ಥಿಕ ವ್ಯವಸ್ಥೆಗಳ ಬಗೆಗಿನ ಚಿತ್ರವೊಂದನ್ನು ಒದಗಿಸಿಕೊಡಲಾಗಿದೆ. ಅಲ್ಲದೆ, ಪ್ರಧಾನ ದೇವತೆಗಳ ಪಾಕಶಾಲೆ, ವಸ್ತ್ರಾಭರಣ ಭಂಡಾರ ಮತ್ತು ಮನರಂಜಕ ಬಳಗಗಳ (‘ನಾಗವಾಸ’ ಅಥವಾ ನಾಟ್ಯಗಾರ್ತಿಯರ ಮತ್ತು ‘ಮೊಖರಿಗ’ ಅಥವ ವಾದ್ಯ-ಸಂಗೀತಗಾರ) ಬಗ್ಗೆ ಒಳನೋಟವನ್ನು ಕೊಡಲಾಗಿದೆ. ಹೊಯ್ಸಳರ ಆಳ್ವಿಕೆಯ ಕಾಲ(ಸು. ಕ್ರಿ.ಶ.1000-1336)ದಲ್ಲಿ ಕಟ್ಟಡ ಅತ್ಯಂತ ಸುಂದರ ದೇವಾಲಯಗಳಲ್ಲಿ ಕೊನೆಯದೂ ಅಳಿದುಳಿದ ಈ ಶೈಲಿಯ ವಿಷ್ಣು ತ್ರಿಕೂಟಗಳಲ್ಲಿ ಅದ್ಭುತವಾದುದೂ ಎಂಬ ಹಿರಿಮೆ ಕೇಶವ ದೇವಾಲಯದ್ದು. ವಾಸ್ತು-ಶಿಲ್ಪಿಗಳ ಬಗ್ಗೆ ಈ ದೇವಾಲಯ ಒದಗಿಸುವ ವಿವರಗಳನ್ನು ಸರಿಗಟ್ಟುವ ಮಾಹಿತಿ ನಮ್ಮ ದೇಶದ ಮಧ್ಯಕಾಲೀನ ದೇವಾಲಯಗಳಲ್ಲೆಲ್ಲೂ ಕಾಣಸಿಗುವುದಿಲ್ಲ. ಐದು ಬಗೆಯಲ್ಲಿ ಅಕ್ಷರ ಸಂಯೋಜನೆಮಾಡಿ, ಅರವತ್ತಕ್ಕಿಂತ ಹೆಚ್ಚು ಬಾರಿ ಸಹಿಮಾಡಿರುವ ಕೇಶವ ದೇವಾಲಯದ ಶಿಲ್ಪಿಯೊಬ್ಬ ಭಾರತೀಯ ಕಲಾ ಇತಿಹಾಸದಲ್ಲಿ ದಾಖಲೆಯೊಂದನ್ನು ನಿರ್ಮಿಸಿ, ಆ ಮೂಲಕ ತನ್ನ ಹೆಸರನ್ನು ಚಿರಸ್ಥಾಯಿ ಮಾಡಿಕೊಂಡಿರುವನು. ಇದರ ಪರಿಣಾಮ ಅಲ್ಪಮಟ್ಟಿನದಲ್ಲ, ಏಕೆಂದರೆ ‘ಭಾರತೀಯ ಕಲೆ ಅನಾಮಧೇಯ’ ಮತ್ತು ‘ಭಾರತೀಯ ಶಿಲ್ಪಗಳಿಗೆ ವೈಯಕ್ತಿಕತೆಯನ್ನು ಪ್ರತಿಪಾದಿಸಿಕೊಳ್ಳುವುದರ ಬಗ್ಗೆ ಅನಾಸಕ್ತಿ’, ಎಂಬ ವ್ಯಾಪಕ ನಂಬಿಕೆಯನ್ನು ಇದು ಅಲ್ಲಗಳೆಯುವುದು. ಇಷ್ಟೇ ಕುತೂಹಲಕರವಾದ ಮತ್ತೊಂದು ವಿಶೇಷತೆ ಈ ಅಗ್ರಹಾರದ ಸಂಸ್ಥಾಪಕನು ತಾನು ಶೂದ್ರನೆಂದು ಸ್ಪಷ್ಟವಾಗಿ ಸಾರಿಕೊಂಡಿರುವುದು. ಸಂಸ್ಕøತ ಶಬ್ದ ಸಂಪದವನ್ನು ಸಮರ್ಥವಾಗಿ ಬಳಸಿಕೊಂಡು ಸೂಕ್ಷ್ಮ ತೆರೆಯನ್ನೆಳೆಯಲು ಈ ಶೂದ್ರನನ್ನು ‘ಬ್ರಹ್ಮಪಾದ’ಪುತ್ರನೆಂದು ಚತುರ ಕವಿಯೊಬ್ಬ ಬಣ್ಣಿಸಿರುವುದು ಮತ್ತೊಂದು ಮಾತು.

ಅಭಿನವ24 products on store
Payment types
Create your own online store for free.
Sign Up Now