ಮುಸುಗು (ಕಾದಂಬರಿ)

Share
  • Ships within 3 days
₹ 225
Description

ಲೇಖಕರು: ಕೆ.ವಿ. ತಿರುಮಲೇಶ್
ಪ್ರಕಾಶನ: ಅಭಿನವ, ಬೆಂಗಳೂರು
ಬೆಲೆ: 250/- ರಿಯಾಯಿತಿ: 10%
.............................
ಒಳಿತು' ಸುಮ್ಮನಾದಾಗಕೆಡುಕು' ಮುನ್ನಲೆಗೆ ಬರುತ್ತದೆ. ಈ ಮಾತನ್ನು ಭವಭೂತಿಯಾದಿಯಾಗಿ ಎಲ್ಲ ದಾರ್ಶನಿಕರೂ ಹೇಳಿದ್ದಾರೆ. ನಮ್ಮ ಕಾಲಕ್ಕಂತೂ ಈ ಮಾತು ಸಮರ್ಪಕವಾಗಿದೆ. ತಿರುಮಲೇಶರ ಈ ಕಾದಂಬರಿ ಕೂಡ ಇದೇ ಆಶಯವನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲ ಪರಿಸರದಲ್ಲಿನ ಆಗುಹೋಗುಗಳನ್ನು ಗಮನಿಸುತ್ತದೆ. ಇಲ್ಲಿ ಮುಖ್ಯವಾಗುವುದು: ಒಳಿತ-ಕೆಡುಕಿನ, ಸೋಲು-ಗೆಲುವಿನ ವಿಷಯವಲ್ಲ; ಅಂಥ ಸಂದರ್ಭದಲ್ಲಿ ಮನುಷ್ಯನ ಮನಸ್ಸು ಹೇಗೆ ಸ್ಪಂದಿಸುತ್ತದೆ, ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆÉ, ಅದರ ಪರಿಣಾಮಗಳೇನು ಮುಂತಾಗಿ. ಸಮುದಾಯವು ವ್ಯಕ್ತಿಯ ಆಶಯಗಳನ್ನು ಹೇಗೆ ನಿಯಂತ್ರಿಸುತ್ತದೆ ಮತ್ತು ಅವುಗಳಿಂದ ಆ ವ್ಯಕ್ತಿತ್ವದಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ.

ಕನ್ನಡ ಕಾದಂಬರಿ ಪರಂಪರೆಯಲ್ಲಿ ಭಿನ್ನ ಆಶಯ ಮತ್ತು ನಿರೂಪಣೆಯ ಕಾದಂಬರಿ ಇದು.