ಪದಸೋಪಾನ (ವರ್ತಮಾನದ ತಲ್ಲಣ ನಿರಂತರದ ಧ್ಯಾನ)
ಪದಸೋಪಾನ (ವರ್ತಮಾನದ ತಲ್ಲಣ ನಿರಂತರದ ಧ್ಯಾನ)
ಪದಸೋಪಾನ (ವರ್ತಮಾನದ ತಲ್ಲಣ ನಿರಂತರದ ಧ್ಯಾನ)
Share:
₹360
Ships within 3 days
SKU :
100
Description

ಲೇಖಕರು: ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಕಾಶನ: ಅಭಿನವ, ಬೆಂಗಳೂರು ಪುಟಗಳು: 304, ಬೆಲೆ: 400/- ರಿಯಾಯಿತಿ 10% ISBN: 978-81-945570-6-7 ................ ನಮ್ಮಲ್ಲಿ ಕಾಲ’ ಮತ್ತುಕ್ರಿಯೆ’ ಎಂಬೆರಡು ಶಬ್ದಗಳಿವೆ. ಇವು ವರ್ತಮಾನವನ್ನೂ ನಿರಂತರತೆಯನ್ನೂ ಸೂಚಿಸುವಂಥವು. ‘ಪದಸೋಪಾನ’ದ ಬರಹಗಳಿಗೆ ಈ ಹಿನ್ನೆಲೆಯಿದೆ. ಅವು ವರ್ತಮಾನ’ದ ತಲ್ಲಣಗಳಿಗೆ ಸ್ಪಂದಿಸುತ್ತಲೇನಿರಂತರತೆ’ಯನ್ನು ಧ್ಯಾನಿಸುತ್ತವೆ. ಭಾಷೆ, ಸಾಹಿತ್ಯ, ಪರಿಸರ, ಪ್ರವಾಸ, ತತ್ವಜ್ಞಾನ, ಚರಿತ್ರೆ, ಪುರಾಣ, ವಿಜ್ಞಾನ, ಅಹಾರ, ಧರ್ಮ, ಪ್ರಭುತ್ವ, ಹೀಗೆ ಈ ಬರಹಗಳ ವಿಸ್ತಾರ, ವೈವಿಧ್ಯ ಬೆರಗು ಮೂಡಿಸುವಂತಿದೆ. ನಿಂತ ನೆಲದಲ್ಲಿ ಗಟ್ಟಿಯಾಗಿ ಕಾಲೂರಿ ಜಗತ್ತನ್ನು ಒಳಗೊಳ್ಳುವ ಇಲ್ಲಿಯ ರಚನಾವಿನ್ಯಾಸ ಅಂಕಣ’ವನ್ನು ಮೀರಿಆಕಾರ’ ಪಡೆಯುವಂಥದು. ವ್ಯಕ್ತಿ’ಯನ್ನು ಮೀರಿವ್ಯಕ್ತಿತ್ವ’ವನ್ನು ಪ್ರಕಟಪಡಿಸುವಂಥದು. ಜಾನಪದ’ದಿಂದಜಾಗತಿಕ’ದವರೆಗಿನ ವಿಸ್ತಾರ ಅಧ್ಯಯನ, ಆಳವಾದ ಪರಿಶ್ರಮ; ನರಹಳ್ಳಿಯವರ ಬರವಣಿಗೆಯ ಲಯ’ವನ್ನು ರೂಪಿಸಿದ್ದರೂ, ಅದರ ಅಂತಃಸತ್ವ ಅಡಗಿರುವುದುಕನ್ನಡ ಬಹುತ್ವ ಪರಂಪರೆ’ಯಲ್ಲಿಯೇ. ಎಲ್ಲವನ್ನೂ, ಎಲ್ಲರನ್ನೂ ಬಿಡಿ’ಯಾಗಿಯಲ್ಲದೆಇಡಿ’ಯಾಗಿ ನೋಡಬೇಕೆನ್ನುವ ಅವರ ‘ಸಮಗ್ರ ನೋಟ’ ನಿಲವುಗಳು ಸಹಜವಾಗಿ ಪ್ರಕಟಗೊಂಡಿವೆ. (ಬೆನ್ನುಡಿಯಿಂದ)

ಅಭಿನವ24 products on store
Payment types
Create your own online store for free.
Sign Up Now