ಎಲ್ಲ ಕತೆ, ಕಾದಂಬರಿಗಳು
ಎಲ್ಲ ಕತೆ, ಕಾದಂಬರಿಗಳು
ಎಲ್ಲ ಕತೆ, ಕಾದಂಬರಿಗಳು
Share:
₹135
Ships within 3 days
SKU :
0
Description

ಲೇಖಕರು: ದೇವನೂರ ಮಹಾದೇವ ಬೆಲೆ: 150/- ಪುಟಗಳು: 176 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು. ................. ನಾನು ಕಳೆದ ಇಪ್ಪತ್ತೆ ೈದು ವರ್ಷದಿಂದ ಬಲ್ಲಂತೆ ದೇವನೂರ ಮಹದೇವ ಸೋಮಾರಿತನದ, ಡೋಲಾಯಮಾನದ, ಹಿಂಜರಿಕೆಯ ವ್ಯಕ್ತಿ; ಇದೆಲ್ಲದರ ಆಳದಲ್ಲಿ ಹರಿತವಾದ ಸೂಕ್ಷ ್ಮಮನಸ್ಸಿನ ನ್ಯಾಯವಂತ ಮನುಷ್ಯ ಕೂಡ. ಇವೆರಡೂ ಗುಂಪಿನ ಗುಣಗಳನ್ನು ಮೀರಿದ್ದು ಅವರ ಸಹಜ ಪ್ರೀತಿ ಮತ್ತು ಜೀವನ ಪ್ರೇಮ. ಸಾಹಿತಿಯಾದವನು ಎಲ್ಲರಂತೆ ನೋಡ- ಬಯಸುತ್ತಾನೆ. ಮನುಷ್ಯ, ಮರ, ಪ್ರಾಣಿ, ಆಕಾಶ, ಮಣ್ಣು ಇದೆಲ್ಲದರ ಖಚಿತ ಗುಣ ಮತ್ತು ಗಾತ್ರ ಅವನಿಗೆ ತಿಳಿಯುವುದೇ ಹೀಗೆ. ಆದರೆ ಎಲ್ಲರಂತೆ ನೋಡುತ್ತಿರುವಾಗಲೇ ಅವನಿಗೆ ವಿಶೇಷವಾದದ್ದು ಕಾಣುತ್ತದೆ. ಅದು ವಿಶೇಷವಾದದ್ದು ಎಂಬ ವಿಶ್ವಾಸ ಅವನಲ್ಲಿದ್ದರೆ ಮಾತ್ರ ಅವನು ಅದನ್ನು ಆದಷ್ಟೂ ಸಮರ್ಪಕವಾಗಿ ಹೇಳುವ ವಿಧಾನಗಳನ್ನು ಕಂಡುಕೊಳ್ಳುತ್ತಾನೆ. ಪ್ರೀತಿ, ಔದಾರ್ಯವಿಲ್ಲದಿದ್ದರೆ, ತನ್ನ ಬಗ್ಗೆ ನಿಷ್ಠುರತೆ ಮತ್ತು ಇತರರ ಬಗ್ಗೆ ಸಹಾನುಭೂತಿ ಇಲ್ಲದಿದ್ದರೆ ಜೀವನದ ಬಾಗಿಲು ಲೇಖಕನಿಗೆ ತೆರೆಯುವುದೇ ಇಲ್ಲ. ಮಹಾದೇವರ `ಡಾಂಬರು ಬಂದುದು' ಕತೆಯ ಪಟೇಲರು ಮತ್ತು ಆಧುನಿಕ ಹುಡುಗರಾದ ಲಕುಮ, ರಾಜಪ್ಪ, ಶಂಭು, ಮಾದು ಇವರ ನಡುವಿನ ಮನಃಸ್ತಾಪ ನೋಡಿ. ಊರಿಗೆ ರಸ್ತೆ ಮಾಡಿಸಿ ಅದರಲ್ಲಿ ಬಂದ ಲಾಭದಲ್ಲಿ ದೇವಸ್ಥಾನ ಕಟ್ಟಿಸುವುದಾಗಿ ಹೇಳುª ಪಟೇಲರು ಆ ಹುಡುಗರಿಗೆ ಪಾಳೇಗಾರರ ಪ್ರತಿನಿಧಿಯಂತೆ ಕಾಣುತ್ತಾರೆ. ಆ ಹುಡುಗರ ಸಿಟ್ಟು ಪಟೇಲರಿಗೆ ಅರ್ಥವಾಗುವುದಿಲ್ಲ; ಪಟೇಲರ ಮೌಲ್ಯ ಅವರಿಗೆ ತಿಳಿಯುವುದಿಲ್ಲ. ಓದುಗರ ನಿರೀಕ್ಷೆ ಮೀರಿ ಪಟೇಲರು ಮೌನ ತಾಳುತ್ತಾರೆ. ಅವರ ನೋವಿನ ಎದುರು ಹುಡುಗರ ಪ್ರತಿಭಟನೆ ಕಾವು ಕಳೆದುಕೊಳ್ಳುತ್ತದೆ. ಪಟೇಲರ ಮೌನ ಇಲ್ಲಿ ವಿಶೇಷ. -ಪಿ. ಲಂಕೇಶ್ (ಪ್ರಸ್ತಾವನೆಯಿಂದ)

ಅಭಿನವ24 products on store
Payment types
Create your own online store for free.
Sign Up Now