ಲೈಂಗಿಕ ಜಾತಕ (ಕಾದಂಬರಿ)

Share
  • Ships within 3 days
₹ 135
Description

ಲೇಖಕರು: ಕೆ. ಸತ್ಯನಾರಾಯಣ
ಬೆಲೆ: 150/-
ರಿಯಾಯಿತಿ 10%
ಪ್ರಕಾಶನ: ಅಭಿನವ, ಬೆಂಗಳೂರು

ಕೆ. ಸತ್ಯನಾರಾಯಣ,
ಲೈಂಗಿಕ ಜಾತಕ ಓದಿದೆ. ಇಷ್ಟವಾಯಿತು. ನಿಗೂಢವಾದ ಅಂತರಂಗವೊಂದು ನಿರ್ಭಿಡೆಯಿಂದ ಬಹಿರಂಗಕ್ಕೆ ಬಂದು ಮೈನೇವರಿಸಿಕೊಂಡ ಅನುಭವವಾಯಿತು. ಅನುಭವ ಲೋಕಕ್ಕಿಂತ ವೈಚಾರಿಕ ಲೋಕಕ್ಕೆ ಒತ್ತು ಬೀಳುವುದು ದೇಹದ ಉಪಾಧಿ ದಾಟಲಾಶಿಸುವ ಬರವಣಿಗೆಗೆ ಅನಿವಾರ್ಯ.
ಮಾನವನ ಮನೋವೃತ್ತಿಯು ದೈಹಿಕ ಲಿಂಗವಿವಕ್ಷೆಗೆ ಯಾವ ಪ್ರಮಾಣದಲ್ಲಿ ಬದ್ಧತೆಹೊಂದಿದೆ ಎಂಬ ಬಗ್ಗೆ ಅಕ್ಕನ ಕಾಯಮಿತಿ ದಾಟಿಕೊಳ್ಳುವ ಆಶಯದ ಅಭಿವ್ಯಕ್ತಿಯಿಂದ ಹಿಡಿದು ಕಾರಂತರ ಮೈಮನದ ಇಜ್ಜೋಡಿನ ಒಳಸುಳಿಯ ವರೆಗೆ ವಿವೇಚನೆ ನಡೆಯುತ್ತಲೇ ಬಂದಿದೆ. ವಸುಧೇಂದ್ರರ ಕಥನಗಳಲ್ಲಿ, ಸತ್ಯನಾರಾಯಣರ ಲೈಂಗಿಕ ಜಾತಕ ಕಾದಂಬರಿಯಲ್ಲಿ ಕಾಯದ ಕಟ್ಟು ಮತ್ತು ಮನಸ್ಸಿನ ಲಂಘನಾಶಯದ ವಿವಕ್ಷೆ ಗಂಭೀರವಾಗಿ ಮುಂದುವರೆದಿದೆ.
-ಎಚ್ಚೆಸ್ವಿ