ಮಾತು ತಲೆ ಎತ್ತಿದ ಬಗೆ (ಭಾರತೀಯ ಸಮಾಜಕ್ಕೆ ಪ್ರತಿಸ್ಪಂದನೆ)
ಮಾತು ತಲೆ ಎತ್ತಿದ ಬಗೆ (ಭಾರತೀಯ ಸಮಾಜಕ್ಕೆ ಪ್ರತಿಸ್ಪಂದನೆ)
ಮಾತು ತಲೆ ಎತ್ತಿದ ಬಗೆ (ಭಾರತೀಯ ಸಮಾಜಕ್ಕೆ ಪ್ರತಿಸ್ಪಂದನೆ)
Share:
₹112.50
Ships within 3 days
SKU :
100
Description

ಸಂಪಾದಕರು: ನ. ರವಿಕುಮಾರ ಬೆಲೆ: 125/- ಪುಟಗಳು: 136 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ............................... ಪುತಿನ ಒಮ್ಮೆ ಹೇಳಿದ ಮಾತು ನೆಪಪಾಗುತ್ತದೆ. ದೇಶ ಎಂದರೆ ಏನೆಂದುಕೊಂಡಿದ್ದೀರಿ. ದೇಶವೆಂದರೆ ಕೇವಲ ಭೂಪಟವಲ್ಲ, ನೆಲವಲ್ಲ ದೇಶವೆಂದರೆ ಜನ'. ಈ ನೆಲದ ಮುಖ್ಯ ಗುಣವೆಂದರೆ ಕಾಲ ಸಂದರ್ಭಗಳಿಗನುಗುಣವಾಗಿ ವ್ಯಕ್ತಿಗಳನ್ನು ಸೃಷ್ಟಿಸಿಕೊಳ್ಳುವುದು. ನಮ್ಮ ದೇಶದ ಇತಿಹಾಸವೆಂದರೆ ಇಂಥ ಮಹಾನ್ ಪುರುಷರ ಜೀವನಚಿತ್ರಣ. ಹೀಗೆ ತಮ್ಮ ಜೀವನದ ಮೂಲಕ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಸಮುದಾಯಗಳನ್ನು ಬೆಸೆದ, ಅವರ ಜೀವನಕ್ರಮಗಳನ್ನು ರೂಪಿಸಿದ ಹಾಗು ಹೊಸಬಗೆಯಲ್ಲಿ ಸಮಾಜವನ್ನು ಕಟ್ಟಲು ಪ್ರಯತ್ನಿಸಿದ ರಾಜಾನುಜಾಚಾರ್ಯಯರು ಪ್ರಮುಖರು. ರಾಮಾನುಜಾಚಾರ್ಯರು(1017-1137)ಹುಟಿದ್ದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ. ತಾಯಿ ಕಾಂತಿಮತಿ, ತಂದೆ ಕೇಶವ ಸೋಮಯಾಜಿ. ಯಾದವ ಪ್ರಕಾಶರು ಗುರುಗಳು. ಅದ್ವೈತದ ಪ್ರತಿಪಾದಕರಾದ ಗುರುಗಳ ವಿಚಾರಗಳಲ್ಲಿ ಭಿನ್ನಮತ ಹೊಂದಿ ವಿಶಿಷ್ಟಾದ್ವೈತವನ್ನು ಪ್ರತಿಪಾದಿಸಿದವರು ರಾಮಾನುಜರು. ಚೋಳ ರಾಜನ ಉಪಟಳ ತಾಳಲಾರದೆ ಕರ್ನಾಟಕ್ಕೆ ಬಂದರೆಂದು ಹೇಳುತ್ತಾರೆ. ರಾಮಾನುಜರು ಬರೆದ ಕೆಲವು ಮುಖ್ಯ ಕೃತಿಗಳೆಂದರೆವೇದಾಂತ ಭಾಷ್ಯ',ಶ್ರೀ ಭಾಷ್ಯ' ಮತ್ತು ಭಗವದ್ಗೀತೆಗೆ ಬರೆದ ಭಾಷ್ಯಗಳು ಮುಖ್ಯವಾದವು. ಭಕ್ತಿ ಅಥವಾ ಸಮರ್ಪಣೆಯೇ ಜ್ಞಾನದ ಸ್ಥಿತಿ ಎಂಬ ದೃಷ್ಟಿಕೋನವೇ ಭಾರತಿಯ ಜ್ಞಾನಮೀಮಾಂಸೆಗೆ ರಾಮಾನುಜರ ಕೊಡುಗೆ. ಅವರ ಪ್ರಕಾರಬ್ರಹ್ಮಜ್ಞಾನವೆಂದರೆ ನೇರವಾಗಿ ಅದನ್ನು ಗ್ರಹಿಸುವುದು. ವ್ಯಕ್ತಿಯಲ್ಲ್ಲಿ ಭಕ್ತಿಯು ದೃಢವಾಗಿ ಬೇರೂರಿದಾಗ ಅದು ಪರಭಕ್ತಿಯಾಗಿ ಬದಲಾಗುತ್ತದೆ. ಇದುವೆ ಭಕ್ತಿಯ ಪರಮೋಚ್ಚ ಸ್ಥಿತಿ. ಇಷ್ಟಾದರೂ ಭಕ್ತಿಯೆಂದರೆ ಬ್ರಹ್ಮ ಪ್ರಕೃತಿಯ ನೇರ ಅರಿವಿನ ಸ್ಥಿತಿ, ಹೀಗಾಗಿ ಅದುವೆ ಜ್ಞಾನದ ಒಂದು ಬಗೆಯೂ ಹೌದು'. ಗುರುಗಳು ಒಮ್ಮೆ ಓಂ ನಮೋ ನಾರಾಯಣಾಯ' ಎಂಬ ಮಂತ್ರವನ್ನು ಹೇಳಿಕೊಟ್ಟರು. ಜೊತೆಗೆಈ ಮಂತ್ರವನ್ನು ನೀನು ಗುಟ್ಟಾಗಿ ಜಪಿಸಬೇಕು. ಒಂದೊಮ್ಮೆ ಬೇರೆಯವರಿಗೆ ಹೇಳಿದರೆ ನರಕಕ್ಕೆ ಹೋಗುವೆ' ಎಂಬ ಎಚ್ಚರಿಕೆಯನ್ನೂ ಕೊಟ್ಟರು. ಮಾರನೆಯದಿನವೇ ಶ್ರೀರಂಗಂ ದೇವಾಲಯದ ಗೋಪುರ ಏರಿ ಈ ಮಂತ್ರವನ್ನು ಎಲ್ಲರಿಗೂ ಕೇಳುವಂತೆ ಹೇಳಿಬಿಟ್ಟರು. ಯಾರೋ ಇದು ಗುರುವಿನ ನಿಯಮದ ಉಲ್ಲಂಘನೆ' ಎಂದರು. ಅದಕ್ಕೆ ರಾಮಾನುಜನ್ ಅವರು ಹೇಳಿದ್ದೇನು ಗೊತ್ತೇ?ನಾನು ಗುರುವಿನ ಎಚ್ಚರಿಕೆಯನ್ನು ಉಲ್ಲಂಘಿಸಿ ನರಕಕ್ಕೆ ಹೋದರೂ ಪರವಾಗಿಲ್ಲ ಆದರೆ ಈ ಮಂತ್ರವನ್ನು ಕೇಳುವ ಎಲ್ಲ ಜನರೂ ಸ್ವರ್ಗಕ್ಕೆ ಹೋಗುವಂತಾಗಲಿ'. ಈ ನೆಲದ ಬಹುಮುಖತೆಯನ್ನು ಎತ್ತಿ ಹಿಡಿದವರಲ್ಲಿ ರಾಮಾನುಜರು ಮುಖ್ಯರು.

-ರಾಮಾನುಜಾಚಾರ್ಯ

ಅಭಿನವ24 products on store
Payment types
Create your own online store for free.
Sign Up Now