ಕಾವ್ಯಸೃಷ್ಟಿಯ ಸ್ವರೂಪ
ಕಾವ್ಯಸೃಷ್ಟಿಯ ಸ್ವರೂಪಕಾವ್ಯಸೃಷ್ಟಿಯ ಸ್ವರೂಪ
ಕಾವ್ಯಸೃಷ್ಟಿಯ ಸ್ವರೂಪ
Share:
₹45
Ships within 3 days
SKU :
0
Description

ಲೇಖಕರು: ಪ್ರಭುಶಂಕರ ಬೆಲೆ: 50/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ...................................... ಕಾವ್ಯಸೃಷ್ಟಿಯ ಕುರಿತು ಮೊದಲಿನಿಂದಲೂ ಬೇರೆ ಬೇರೆ ನೆಲೆಗಳಲ್ಲಿ ತುಂಬಾ ಸ್ವಾರಸ್ಯಕರವಾಗಿ ಚರ್ಚೆಯಾಗುತ್ತಾ ಬಂದಿದೆ. ಕಾವ್ಯಸೃಷ್ಟಿಯ ಸ್ವರೂಪವನ್ನು ಕುರಿತಂತೆ ಕಲಾಮೀಮಾಂಸೆಯ ಹಿನ್ನೆಲೆಯಲ್ಲಿ ಪರಿಶೀಲಿಸುವ ಪ್ರಯತ್ನ ಇದು. -ಡಾ. ಪ್ರಭುಶಂಕರ

ಕಾವ್ಯಸೃಷ್ಟಿಯ ಸ್ವರೂಪ ಪುಸ್ತಕದಿಂದ ಆಯ್ದ ಭಾಗ....

ಹಾಸಾದ ಮಿಂಚಿನಂದ ಬೀಸಿದ್ದ ಸೆರಗಿನಿಂದ ಸೆಳೆದಂತೆ ಎರಡು ನೂಲು ಉಳದಾವ ನಾಕು ಸಾಲು! -ದ.ರಾ. ಬೇಂದ್ರೆ (ಗಂಗಾವತರಣ)

ಮಗು ಮಲಗಿದೆ. ತಾಯಿ ಅದರ ಮೇಲೆ ತನ್ನ ಸೆರಗನ್ನು ಹೊದೆಸಿದ್ದಾಳೆ. ತಾಯಿ ತನ್ನನ್ನು ಬಿಟ್ಟು ಎದ್ದು ಹೊರಟುಬಿಟ್ಟಾಳು ಎಂದು ಮಗು ತಾಯಿಯ ಸೆರಗನ್ನು ಭದ್ರವಾಗಿ ಹಿಡಿದುಕೊಂಡೇ ನಿದ್ರೆ ಮಾಡಿಬಿಟ್ಟಿದೆ. ಆದರೆ ತಾಯಿ ಅನಿವಾರ್ಯವಾಗಿ ಎದ್ದು ಹೋಗಬೇಕು, ಎದ್ದು ಹೊರಟಿದ್ದಾಳೆ. ಹಾಗೆ ಹೋಗುವಾಗ ಮೆಲ್ಲನೆ ಸೆರಗನ್ನು ಬಿಡಿಸಿಕೊಂಡು ಹೋಗಿದ್ದಾಳೆ. ಆದರೆ ಮಗುವಿನ ಮೃದುವಾದರೂ ಬಿಗಿಯಾದ ಮುಷ್ಟಿ ನಾಲ್ಕು ಎಳೆ ನೂಲನ್ನು ಹಿಡಿದಿಟ್ಟುಕೊಂಡಿದೆ. ಹಾಗೆಯೇ ಲೋಕದ ಅನುಭವ ತನ್ನ ಮಿಂಚಿನ ತಾಯಿ-ಸೆರಗನ್ನು ಎಸೆದಿದೆ. ಕವಿ ತಾಯಿಯನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಆದರೆ ಉಳಿಯುವುದು ನಾಲ್ಕೇ ಸಾಲು, ಕವಿಗೂ ಅಷ್ಟೆ; ಕಲಾವಿದನಿಗೂ ಅಷ್ಟೇ.

ಅಭಿನವ24 products on store
Payment types
Create your own online store for free.
Sign Up Now