ಸಾಹಿತ್ಯ ಅಧ್ಯನದ ನೆಲೆಗಳು
ಸಾಹಿತ್ಯ ಅಧ್ಯನದ ನೆಲೆಗಳು
ಸಾಹಿತ್ಯ ಅಧ್ಯನದ ನೆಲೆಗಳು
Share:
₹270
Ships within 3 days
SKU :
99
Description

ಸಂಪಾದಕರು: ಪಿ. ಚಂದ್ರಿಕಾ ಬೆಲೆ: 300/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

ಈ ಕೃತಿಗೆ ಬರೆದಿರುವ ಪ್ರಸ್ತಾವನೆಯ ಆಯ್ದ ಭಾಗ ಇಲ್ಲಿದೆ ಪೂರ್ಣ ಲೇಖನಕ್ಕೆ ಪುಸ್ತಕ ಗಮನಿಸಿ.... ....................................................... ಕವಿಪ್ರತಿಭೆ ದೈವೀಕವಾದದ್ದು ಎಂದು ನಂಬಿದ್ದ ಕಾಲದಿಂದಲೂ ಅದರ ಅರ್ಥೈಸುವಿಕೆಗೆ ಮೀಮಾಂಸಾ ಪರಿಕರವನ್ನು ಜಗತ್ತಿನ ಎಲ್ಲ ಸಾಹಿತ್ಯಗಳು ಕಟ್ಟಿಕೊಟ್ಟಿದ್ದನ್ನು ನೋಡಬಹುದು. ಶಬ್ದಾರ್ಥಗಳ ಜಾಡನ್ನು ಹಿಡಿದು ಅನೇಕ ಶಾಸ್ತ್ರಗಳು ಜೀವ ತಳೆದವು. ಛಂಧಶಾಸ್ತ್ರ, ಭಾಷಾಶಾಸ್ತ್ರ, ಸೌಂದರ್ಯಶಾಸ್ತ್ರ, ಧ್ವನಿಶಾಸ್ತ್ರ, ರಸ ಹೀಗೆ ವ್ಯವಸ್ಥಿತವಾಗಿ ಒಂದು ಚೌಕಟ್ಟನ್ನು ನಿರ್ಮಿಸಿ ಅದರೊಳಗೆ ಕಾವ್ಯವನ್ನಿಟ್ಟು ಅರ್ಥ ಹುಡುಕುವ ಪ್ರಯತ್ನಗಳನ್ನು ಮಾಡಲಾಯಿತು. ಒಂದು ಕಾಲಕ್ಕೆ ಮೂಲಕ್ಕಿಂತಲೂ ಭಿನ್ನವಾಗಿ ಕನ್ನಡ ಮಾರ್ಪಡಿಸಿಕೊಂಡ ಕಥಾಂತರಗಳೇ ಆಯಾಯ ಕವಿಯ ಮತ್ತು ಕಾಲಧರ್ಮವನ್ನು ಹೇಳುತ್ತಾ ಬಂದಿದ್ದು ಮೀಮಾಂಸೆಯ ಒಂದು ಕ್ರಮವೇ ಆಗಿತ್ತು. ಮತ್ತು ಇಂಥ ಕಥಾಂತ್ರಗಳೇ ಕನ್ನಡದ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು ತಾತ್ವಿಕ ತಳಹದಿಯನ್ನು ರೂಪಿಸುತ್ತಿದ್ದುದನ್ನು ಮರೆಯುವಂತಿಲ್ಲ. ನೈಜಾನುಭವಗಳಲ್ಲಿ ಹುಟ್ಟಿದ ಸಾಹಿತ್ಯಕ್ಕೆ ಅರ್ಥೈಸುವ ಹೊತ್ತಿನಲ್ಲಿ ತತ್ವವಾದಗಳು ಏಕೆ ಬೇಕು? ಅಥವಾ ಸಾಹಿತಿಯೇ ಅಂಥದ್ದೊಂದು ತತ್ವವಾದವನ್ನು ಬೆಳೆಸುತ್ತಾನೆಯೇ? ಅಥವಾ ಬದುಕೇ ಕಾಲಾಂತರದಲ್ಲಿ ಬದಲಾವಣೆಯ ದಿಕ್ಕನ್ನು ಹಿಡಿದು ಈ ತತ್ವವಾದಗಳನ್ನು ಹುಟ್ಟು ಹಾಕುತ್ತದೆಯೇ? ಎನ್ನುವ ಪ್ರಶ್ನೆಗೆ ಉತ್ತರ ತೀರಾ ಸಂಕೀರ್ಣವಾದುದ್ದೇ. ಸಾಹಿತ್ಯವು ತನ್ನ ಕಾಲದ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಲೇ ಅದರ ಪ್ರವಾಹಕ್ಕೆ ಒಳಗಾಗಿರುತ್ತದೆ. ತನಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಂಡು ಅದನ್ನು ರಚನಾತ್ಮಕ ವಿನ್ಯಾಸದಲ್ಲಿರಿಸುವ ಯತ್ನದಲ್ಲಿ ತೊಡಗಿಕೊಂಡಿರುತ್ತದೆ. ‘ಸಾಹಿತ್ಯ ಜೀವನದ ಸ್ಥಿತಿಗತಿಗಳನ್ನು ಅರಿತು, ಅದನ್ನು ಒಂದು ನಿಶ್ಚಿತ ದಿಶೆಯಲ್ಲಿ ರೂಪಿಸುವುದನ್ನು ಪ್ರಾರಂಭಿಸುತ್ತದೆ. ಅದು ಬದುಕಿನ ಅರ್ಥವನ್ನು ಹೇಳಿ, ಬದುಕಿಗೆ ಅರ್ಥವಂತಿಕೆಯನ್ನು ಕೊಡುವಂಥದ್ದು. `ಡಿಕೆನ್ಸ್ ಜೈಲಿನ ಶಾಲೆಗಳ ಸುಧಾರಣೆಯನ್ನು ಹೇಳಿದ ಎನ್ನುವ ಮಾತು ದೊಡ್ಡದಲ್ಲ. ಆದರೆ ಆತನ ಸಾಹಿತ್ಯದ ಹಿಂದೆ ಮಾನವ ಸಮಾಜವನ್ನು ಸುಧಾರಿಸುವ ವಿಚಾರಗಳಿದ್ದವು ಎಂಬುದು ಮುಖ್ಯ. ಸಾಹಿತ್ಯವು ಜೀವನದ ಮೇಲೆ ಪರಿಣಾಮ ಉಂಟುಮಾಡುವುದು ಒಂದು ಪಾತ್ರ ಅಥವಾ ಘಟನೆಯ ನಿರೂಪಣೆಯಿಂದಲ್ಲ. ಆದರೆ ಆ ಪಾತ್ರ, ಘಟನೆಯ ಹಿಂದೆ ಎತ್ತಿ ಹಿಡಿದ ವಿಚಾರದಿಂದ. ಅದು ಸಾಹಿತ್ಯ ಸಿದ್ಧಾಂತ.’ (ಸಾಹಿತ್ಯದಲ್ಲಿ ತತ್ವವಾದಗಳು ಪಿ. ವಿ. ಶಾಸ್ತ್ರಿ. ಪುಟ 6. 1976) ಸಾಹಿತ್ಯವೆಂದರೆ ಒಂದು ಜೀವನಕ್ರಮ ಎಂದು ನಂಬಿದಾಗ ಈ ಮಾತುಗಳಿಗೆ ಹೆಚ್ಚು ಅರ್ಥವಂತಿಕೆ ಸಿಗುತ್ತದೆ. ಸಾಮಾಜಿಕ, ರಾಜಕೀಯ, ತತ್ವಜ್ಞಾನಗಳು ಜೀವನವನ್ನು ಕೇಂದ್ರವಾಗಿಸಿಕೊಂಡಾಗ ಅಲ್ಲೊಂದು ತಾತ್ವಿಕತೆ ಹುಟ್ಟುತ್ತದೆ. ಇದು ಬೇರೆಲ್ಲಾ ಜ್ಞಾನ ಶಿಸ್ತ್ತುಗಳನ್ನು ಒಳಗೊಂಡೂ ಬದುಕಿನ ನಾಡಿಮಿಡಿತವನ್ನು ಅರಿಯುವತ್ತ ಉತ್ಸುಕವಾಗಿರುತ್ತದೆ. ಇದು ಭಾವನಾ ನೆಲೆಯಲ್ಲಿ ತನ್ನನ್ನು ಕಂಡರಿಸಿಕೊಂಡಾಗ ಅಲ್ಲಿ ಜೀವನಕ್ಕೆ ಬೇಕಾದ ತಾತ್ವಿಕತೆ ದೊರೆಯುತ್ತದೆ. ಈ ಬಗೆಯ ತಾತ್ವಿಕತೆಯಲ್ಲಿ ಹೆಚ್ಚು ನಿರ್ದಿಷ್ಟತೆಯೂ, ವ್ಯಾಪಕತೆಯೂ ಮನೆಮಾಡಿರುತ್ತದೆ....

ಅಭಿನವ24 products on store
Payment types
Create your own online store for free.
Sign Up Now