ಸಾಹಿತ್ಯದಲ್ಲಿ ಪ್ರಗತಿ (ವಿಮರ್ಶಾ ಲೇಖನಗಳು)
ಸಾಹಿತ್ಯದಲ್ಲಿ ಪ್ರಗತಿ (ವಿಮರ್ಶಾ ಲೇಖನಗಳು)
ಸಾಹಿತ್ಯದಲ್ಲಿ ಪ್ರಗತಿ (ವಿಮರ್ಶಾ ಲೇಖನಗಳು)
Share:
₹85
Ships within 3 days
SKU :
100
Description

ಲೇಖಕರು: ವಿ.ಕೃ. ಗೋಕಾಕ್ ಬೆಲೆ: 100/- ರಿಯಾಯಿತಿ : 10% ಪ್ರಕಾಶನ: ಅಭಿನವ, ಬೆಂಗಳೂರು ..................... ಅಂತರ್ಮುಖತೆ,’ಬಹಿರ್ಮುಖತೆ,’ ಮಹೋನ್ನತಿ’ ಹಾಗೂಪ್ರಗತಿ’ಯೆಂದರೆ ಏನೆಂಬುದನ್ನೇ ಈ ಲೇಖಸಂಕಲನವು ಸ್ಪಷ್ಟೀಕರಿಸುತ್ತದೆ. ಮೊದಲಿನ ಲೇಖವು ವಿಮರ್ಶೆಯೆಂದರೇನೆAಬುದನ್ನು ವಿಶದಗೊಳಿಸುತ್ತದೆ. ಒಂದು ಸಾಹಿತ್ಯ ಕೃತಿಯನ್ನು ಅದರ ಮಹೋನ್ನತಿಯನ್ನೇ ಒರೆದು ನೋಡಲಿ ಇಲ್ಲವೆ ಪ್ರಗತಿಯನ್ನೇ ಪರೀಕ್ಷಿಸಲಿ- ವಿಮರ್ಶಿಸಲು ಬೇಕಾಗುವ ಸಾಧನೆಗಳ ಕಲ್ಪನೆಯನ್ನು ಇಲ್ಲಿ ಕೊಡಲು ಪ್ರಯತ್ನಿಸಿದೆ. ಕಾವ್ಯದ ದ್ವಾದಶÀ ಸೂತ್ರಗಳು’ ಎಂಬಲ್ಲಿ ಒಂದು ಕೃತಿಯು ಸಾಹಿತ್ಯವಾಗಬೇಕಾದರೆ ಯಾವ ಯಾವ ಲಕ್ಷಣಗಳನ್ನು ಒಳಗೊಂಡಿರಬೇಕಾಗುವುದೆAಬುದನ್ನು ಸಂಗ್ರಹ ರೂಪವಾಗಿ ಹೇಳಿದೆ. ಪ್ರಗತಿ ಹಾಗೂ ಮಹೋನ್ನತಿಯ ವಿಚಾರಗಳಿಗಿಂತ ಮೊದಲು ಸಾಹಿತ್ಯ ಗುಣದ ಪರಿಶೀಲನೆಯು ಅವಶ್ಯವಿದೆಯೆಂದು ಮೇಲೆಯೇ ಕಾಣುತ್ತದೆ. ಇದು ಇದ್ದ ಮೇಲೆ ಮಾತ್ರ ಉಳಿದ ವಿµÀಯಗಳ ವಿಚಾರಕ್ಕೆ ಪ್ರಾರಂಭವಾಗಬಹುದು.ಕಾವ್ಯದಲ್ಲಿ ಮಹೋನ್ನತಿ’ ಎಂಬ ಲೇಖನದಲ್ಲಿ ಮಹೋನ್ನತಿಯನ್ನು ಒಂದು ಕೃತಿಯಲ್ಲಿ ಪ್ರಕಟಗೊಳಿಸುವ ಅµÁ್ಟಂಗಗಳನ್ನು ವಿವರಿಸಲಾಗಿದೆ. ಆಮೇಲೆ ಅಂತರ್ಮುಖತೆಯ ಹಾದಿಯಿಂದ ಈ ಅµÁ್ಟಂಗಗಳಲ್ಲೊAದಾದ ಕವಿಯ ವ್ಯಕ್ತಿತ್ವದಲ್ಲಿ ಮಹೋನ್ನತಿಯು ಹೇಗೆ ವಿಲಾಸ ಹೊಂದಬಹುದೆAಬುದನ್ನು ತೋರಿಸಲಾಗಿದೆ. ಇದೇ ರೀತಿಯಾಗಿ ಸಾಹಿತ್ಯದಲ್ಲಿ ಬಹಿರ್ಮುಖತೆಯು ಇಲ್ಲವೆ ಸಾಮಾಜಿಕತೆಯು ಹೇಗೆ ಪ್ರಕಟವಾಗಬಲ್ಲದು? ಅದರಲ್ಲಿ ಮಹೋನ್ನತಿಯ ಯಾವ ಮಟ್ಟವನ್ನು ಮುಟ್ಟಬಹುದು? ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಬಹುದು. ಈ ಸಾಮಾಜಿಕತೆಯಲ್ಲಿ ಕಂಡು ಬರುವ ಐದು ವಿಧಗಳನ್ನು ಇಲ್ಲಿ ಸಂಗ್ರಹ ರೂಪವಾಗಿ ಕೊಡಲಾಗಿದೆ:- ೧. ಕವಿಯ ಮನಸ್ಸು ಒಮ್ಮೊಮ್ಮೆ ಸುತ್ತಲಿನ ಜಗತ್ತಿನ ಪ್ರತಿಬಿಂಬನ-ವಿಮರ್ಶನದಲ್ಲಿ ಒಂದು ವಿಶೇµÀ ರಸಸಿದ್ಧಿಯನ್ನು ಪಡೆಯುತ್ತದೆ. ಕಲ್ಪಕತೆಯನ್ನು ವಿನಿಯೋಗಿಸಿ ಸಾಹಿತಿಯು ತನ್ನ ಸುತ್ತಲಿದ್ದ ಸಮಾಜದಲ್ಲಿ ಅಡಕವಾಗಿದ್ದ ಸೌಂದರ್ಯ ವಿಶೇµÀವನ್ನು ತೆರೆದು ತೋರಿಸುತ್ತಾನೆ. ಜನರಿಂದ ತುಂಬಿಹೋಗಿರುವ ಲಂಡನ್ನಿನ ಒಂದು ಓಣಿಯಲ್ಲಿ ವರ್ಡ್ಸ್ವರ್ಥ್ ಕವಿಗೆ ವಿಶೇµÀವೇನೂ ಕಂಡಿರಲಿಕ್ಕಿಲ್ಲ. ಆದರೆ ಡಿಕೆನ್ಸ್ ಎಂಬ ಕಾದಂಬರಿಕಾರನಿಗೆ ಅನಂತ ಸೌಂದರ್ಯವು ಕಂಡಿತು. ಹೋಟೆಲು’ಗಳಲ್ಲಿ ಮೂರ್ತಿ- ರಾಯರೂಝೋನ್’ ತಿಕೀಟಿನಲ್ಲಿ ಜಾಗೀರದಾರರೂ `ಕಸಬರಿಗೆ’ಯಲ್ಲಿ ಬೇಂದ್ರೆಯವರೂ ಒಂದು ಸೊಬಗನ್ನು ಕಂಡುಹಿಡಿದರು. ಸಾಮಾನ್ಯವಾದುದನ್ನು ಈ ರೀತಿಯಾಗಿ ಅಸಾಮಾನ್ಯವಾಗಿಸಿ ತೋರಿಸುವ ಕಲೆಯು ನಮಗೆ ಸಾಮಾಜಿಕ ಸಾಹಿತ್ಯದಲ್ಲಿ ವಿಶೇµÀವಾಗಿ ಕಂಡುಬರುತ್ತದೆ. -ವಿ.ಕೃ. ಗೋಕಾಕ್

ಅಭಿನವ24 products on store
Payment types
Create your own online store for free.
Sign Up Now