ಫ್ರೆಡರಿಕ್ ನೀಷೆ (ಬುದ್ದಿಜೀವಿಯೊಬ್ಬನ ಭಾವಪೂರ್ಣ ಕಥಾನಕ)
ಫ್ರೆಡರಿಕ್ ನೀಷೆ (ಬುದ್ದಿಜೀವಿಯೊಬ್ಬನ ಭಾವಪೂರ್ಣ ಕಥಾನಕ)
ಫ್ರೆಡರಿಕ್ ನೀಷೆ (ಬುದ್ದಿಜೀವಿಯೊಬ್ಬನ ಭಾವಪೂರ್ಣ ಕಥಾನಕ)
Share:
₹216
Ships within 3 days
SKU :
100
Description

ಲೇಖಕರು: ಟಿ.ಎನ್. ವಾಸುದೇವಮೂರ್ತಿ ಬೆಲೆ: 240/- ರಿಯಾಯಿತಿ: 10% ಪ್ರಕಾಶನ: ವಂಶಿ ಪಬ್ಲಿಕೇಷನ್ಸ್, ಬೆಂಗಳೂರು ...................... ದಾನವ ಗುರು ನೀಷೆ

ಕಳೆದ ನೂರೈವತ್ತು ವರ್ಷಗಳಲ್ಲಿ ಜನಿಸಿದ ಮಹಾ ಮೇಧಾವಿಗಳಲ್ಲಿ ಒಬ್ಬನಾದ ಫ್ರೆಡರಿಕ್ ನೀಷೆಯ ಬದುಕು ಸಹ ಅವನ ತತ್ವಜ್ಞಾನದಷ್ಟೇ ವಿಚಿತ್ರ ವಿರೋಧಾಭಾಸಗಳಿಂದ ಕೂಡಿದೆ. ಚರ್ಚಿನ ಪಾದ್ರಿಗಳ ವಂಶದಲ್ಲಿ ಜನಿಸಿದ ಈ ವ್ಯಕ್ತಿ ದೇವರ ಸಾವನ್ನು ಘೋಷಿಸಿದ. ಸತ್ಯ ಮತ್ತು ಸ್ವಾತಂತ್ರ್ಯಗಳನ್ನು ಆರಾಧಿಸಿದ ಒಬ್ಬ ತತ್ವಜ್ಞಾನಿ ನಾಜೀವಾದದ ಹರಿಕಾರನೆನಿಸಿದ (ಇದಕ್ಕೆ ಅವನ ತಂಗಿಗೆ ಧನ್ಯವಾದ ಹೇಳಬೇಕು!). ‘ಹೊಸ ಮನುಷ್ಯ’ನ ಅವತರಣವನ್ನು ಸಾರಿದ ಪ್ರವಾದಿ ಕೊನೆಗೆ ಮಾನಸಿಕವಾಗಿ ಅಸ್ವಸ್ಥನಾದ ತನ್ನ ಬದುಕಿನ ಕೊನೆಯ ದಿನಗಳನ್ನು ಕತ್ತಲೆಯಲ್ಲಿ ಕಳೆದ. ಆಧುನಿಕ ಪಾಶ್ಚಿಮಾತ್ಯ ಚಿಂತನೆಯ ಪಿತಾಮಹನಾದ ಫ್ರೆಡರಿಕ್ ನೀಷೆಯ ಪ್ರತಿಭೆ ಏಕಮುಖಿಯಾದದ್ದಲ್ಲ. ಅವನ ಬರವಣಿಗೆಗಳನ್ನು ಪರಿಶೀಲಿಸಿದರೆ ಆತ ಬರೀ ಬುದ್ಧಿಜೀವಿ ಮಾತ್ರವಲ್ಲ; ಒಬ್ಬ ಸ್ವತಂತ್ರ ಚಿಂತಕ, ನೈತಿಕವಾದಿ, ವಿಜ್ಞಾನಿ, ವಿಜ್ಞಾನ ವಿರೋಧಿ, ಧಾರ್ಮಿಕ ವ್ಯಕ್ತಿ, ಬಂಡಾಯಗಾರ, ಪ್ರವಾದಿ, ಸಂಗೀತ ಶಾಸ್ತ್ರಜ್ಞ, ಅಭಿಜಾತ ಕವಿ, ಒಬ್ಬ ತಿಕ್ಕಲು ಮನುಷ್ಯ ಎಲ್ಲವೂ ಆಗಿದ್ದನೆಂದು ತೋರುತ್ತದೆ. ಅವನು ಸ್ವತಃ ತನ್ನ ಬಗ್ಗೆ - ಮನುಷ್ಯನ ಮನಸ್ಸಿನ * ನೀಷೆಯ ಪ್ರಾತಿನಿಧಿಕ ಲೇಖನಗಳ ಅನುವಾದ ಕೃತಿ ‘ಹುಚ್ಚುತನವೇ ಅನುಗ್ರಹ’(೨೦೧೦)ಕ್ಕೆ ಬರೆದಿದ್ದ ಬೆನ್ನುಡಿಯಲ್ಲಿ ಶ್ರೀ ಯು.ಆರ್. ಅನಂತಮೂರ್ತಿಯವರು ಈ ಪದ ಬಳಸಿದ್ದರು. “ಕನ್ನಡ ಸಾಹಿತ್ಯ ಲೋಕಕ್ಕೂ ವೈಚಾರಿಕ ಲೋಕಕ್ಕೂ ಅತ್ಯಂತ ಅಗತ್ಯವಾಗಿದ್ದ ನೀಷೆಯ ಬಗೆಗಿನ ಒಂದು ಒಳ್ಳೆಯ ಕೃತಿಯನ್ನು ವಾಸುದೇವಮೂರ್ತಿ ಕೊಟ್ಟಿದ್ದಾರೆ. ಕ್ರೈಸ್ತಧರ್ಮಕ್ಕೆ ವಿರೋಧವಾಗಿ ನಿಂತ ಈ ನೀಷೆ ಪಾಶ್ಚಾತ್ಯ ಪ್ರಪಂಚದಲ್ಲಿ ಒಂದು ಹೊಸ ವೈಚಾರಿಕತೆ ಹುಟ್ಟಿಸಿದವನು. ನಮ್ಮ ಎಲ್ಲ ಭಾವುಕ ಸುಳ್ಳುಗಳಿಂದ, ಅನುಭಾವದ ವಂಚನೆಗಳಿಂದ, ಆಧ್ಯಾತ್ಮಿಕ ಕಲ್ಪನೆಗಳಿಂದ ಹೊರಬಂದವನು. ನಮ್ಮನ್ನು ಬೆಚ್ಚಿಸಿ ನಮ್ಮ ಒಳಗನ್ನು ಕನಿಕರವಿಲ್ಲದಂತೆ ಕಾಣಿಸುವ ಈ ದೃಷ್ಟಾರ ನಮ್ಮನ್ನು ಬಿಡುಗಡೆಗೆ ಹುಡುಕುವಂತೆ ಎಲ್ಲ ಧರ್ಮಗಳನ್ನು ಪರೀಕ್ಷಿಸಬಲ್ಲವನು. ಕೆಲವೊಮ್ಮೆ ಇವನನ್ನು ಓದಿದವರು ತಮ್ಮ ಮನಸ್ಸಿನಲ್ಲೇ ನಿಜವೆಂದುಕೊಂಡರೂ ಹೊರಗೆ ಅದನ್ನು ಒಪ್ಪಿಕೊಳ್ಳದವರಾಗಿರುತ್ತಾರೆ. ಹೀಗೆ ನಮಗೆ ನಮ್ಮಿಂದಲೇ ಗುಪ್ತವಾದ ಲೋಕಕ್ಕೆ ಪ್ರವೇಶ ಕೊಡಬಲ್ಲ ದಾನವ ಗುರು ಈ ನೀಷೆ” - ಯು.ಆರ್. ಅನಂತಮೂರ್ತಿ

ಅಭಿನವ24 products on store
Payment types
Create your own online store for free.
Sign Up Now