ಮಹಾಭಾರತ ಅನುಸಂಧಾನದ ಭಾರತಯಾತ್ರೆ
ಮಹಾಭಾರತ ಅನುಸಂಧಾನದ ಭಾರತಯಾತ್ರೆ
ಮಹಾಭಾರತ ಅನುಸಂಧಾನದ ಭಾರತಯಾತ್ರೆ
Share:
₹180
Ships within 3 days
SKU :
94
Description

ಲೇಖಕರು: ಲಕ್ಷ್ಮೀಶ ತೋಳ್ಪಾಡಿ ಬೆಲೆ: 200/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು .................................... ಕುರುಡು ದೊರೆಗೆ (ಧೃತರಾಷ್ಟ್ರನಿಗೆ) ಎಲ್ಲಿಯವರೆಗೆ ಗೆಲುವಿನ ಆಸೆ ಇತ್ತು?

ದುರ್ಯೋಧನನು ತೊಡೆಮುರಿದು ಬಿದ್ದದ್ದನ್ನು ಕೇಳಿದ ಮೇಲೆ ಧೃತರಾಷ್ಟ್ರ ಮತ್ತೆ ಮುಂದಿನ ಮಾತು ಆಡಲಾರ, ಅಲ್ಲಿಗೆ ಅವನ ಕೊನೆಯ ತಂತುವೂ ಹರಿದುಬಿದ್ದಿತೆಂದು, ಎಲ್ಲವೂ ಮುಗಿಯಿತೆನ್ನುವ ಹತಾಶೆಯ ಆಳದಲ್ಲಿ ಅವನು ಮುಳುಗಿದನೆಂದುಕೊಂಡರೆ; ಅಲ್ಲ, ಖಂಡಿತ ಅಲ್ಲ.

ದುರ್ಯೋಧನ ಬಿದ್ದಮೇಲೂ ಅಲ್ಲಿ ಉಗ್ರ ಅಶ್ವತ್ಥಾಮನಿದ್ದಾನೆ. ಪಾಂಡವರ ಮೇಲೆ ಅವನಿಗೆ ನಿತಾಂತ ದ್ವೇಷವಿದೆ. ತನ್ನ ದ್ವೇಷದಲ್ಲಿಯೇ ತನ್ನನ್ನೇ ಮರೆಯಬಲ್ಲನು, ಹುಚ್ಚಾಗಬಲ್ಲನು. ಈ ಸ್ಥಿತಿಯಲ್ಲಿ ಒಂದು ಸಣ್ಣ ಆಶೆ!

ದುರ್ಯೋಧನನ ಮಡದಿಯಲ್ಲಿ ಅಶ್ವತ್ಥಾಮನ ನಿಯೋಗದಿಂದ ಮಕ್ಕಳನ್ನು ಪಡೆದು, ವ್ಯಾಸ ನಿಯೋಗದಿಂದ ಧೃತರಾಷ್ಟ್ರಾದಿಗಳು ಜನಸಿದಂತೆ, ಆ ಮಗುವಿನ ಹೆಸರಿನಲ್ಲಿ ಹಸ್ತಿನಾವತಿಯ ಅಧಿಕಾರ ಪ್ರಶ್ನೆಯನ್ನು ಜೀವಂತವಾಗಿಟ್ಟು ರಾಜ್ಯಲಾಭಕ್ಕಾಗಿ ಮತ್ತೊಮ್ಮೆ ಯತ್ನಿಸುವ ಆಶೆ! (ಆದರೆ ಅಶ್ವತ್ಥಾಮ ಮಲಗಿದ್ದ ದ್ರೌಪದಿಯ ಮಕ್ಕಳನ್ನು ಕತ್ತರಿಸಿ, ಉತ್ತರೆಯ ಒಡಲಶಿಶುವಿಗೆ ಬಾಣವನ್ನೆಸೆದ ನೀಚಕಾರ್ಯಕ್ಕೆ ಕೃಷ್ಣನಿಂದ ಶಾಪಗ್ರಸ್ತನಾಗಿ ನಿಯೋಗಕ್ಕೆ ಅನರ್ಹನಾದನು)

ಅದಕ್ಕೆ ವ್ಯಾಸರು ಹೇಳ್ತಾರೆ "ನಮ್ಮೊಳಗಿನ ರಾಗ-ದ್ವೇಷ ನಮ್ಮ ಸಂತತಿಯಲ್ಲಿಯೂ ಮುಂದುವರೇಯುವುದನ್ನು ತೀವ್ರವಾಗಿ ಬಯಸುವೆವು, ಅದನ್ನೇ ಬದುಕಿನ ಗೆಲುವು ಎನ್ನುವೆವು. ಅದಕ್ಕಾಗಿಯೇ ಮಕ್ಕಳನ್ನು ಬಯಸುವೆವು. ಈ ಅರ್ಥದಲ್ಲಿ ಪೂರ್ವಿಕರನ್ನೂ, ನೂತನರನ್ನೂ ಒಂದು ಮಾಡುವೆವು!"

  • ಲಕ್ಷ್ಮೀಶ ತೋಳ್ಪಾಡಿಯವರ (ಪುಸ್ತಕದಿಂದ ಆಯ್ದ ಭಾಗ)
ಅಭಿನವ24 products on store
Payment types
Create your own online store for free.
Sign Up Now