ವಚನ ದರ್ಶನ (ಹೊಸಕಾಲದ ಪರಿವೇಷದಲ್ಲಿ)
ವಚನ ದರ್ಶನ (ಹೊಸಕಾಲದ ಪರಿವೇಷದಲ್ಲಿ)
ವಚನ ದರ್ಶನ (ಹೊಸಕಾಲದ ಪರಿವೇಷದಲ್ಲಿ)
Share:
₹540
Ships within 3 days
SKU :
100
Description

ಲೇಖಕರು: ಕೆ. ಸಿ. ಶಿವಪ್ಪ ಬೆಲೆ: 600/- ಪುಟಗಳು: 536 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು .................................

ವಚನ ಸಾಹಿತ್ಯದ ಮತ್ತೊಂದು ಓದು ‘ವಚನದರ್ಶನ’. ವಿಷಯಾನುಕ್ರಮಣಿಕೆಯಡಿ ಈವರೆಗೂ ದೊರಕಿರುವÀ ಎಲ್ಲಾ ವಚನಗಳನ್ನು, ಅರ್ಥಪೂರ್ಣವಾದ ಮುನ್ನುಡಿಯೊಂದಿಗೆ ಪರಿಚಯಿಸಿರುವುದು,ಈ ಓದಿನವೈಶಿಷ್ಟ್ಯ. ಅಂದರೆ ನಿಶ್ಚಿತ ಶೀರ್ಷಿಕೆಗಳಡಿ ವಚನಗಳನ್ನು ಈವರೆಗೂತಂದುಕೊಂಡಿಲ್ಲವೆಂದು ಅರ್ಥವಲ್ಲ, ಸಾಂಪ್ರಾದಾಯಿಕ ಶೀರ್ಷಿಕೆಯಡಿ ಮಾಡಿದಅಧ್ಯಯನಗಳಿದ್ದರೂ ಅವು ಇಷ್ಟೊಂದು ಸಮಗ್ರವಾಗಿ, ವ್ಯವಸ್ಥಿತವಾಗಿ, ಮಾಡಿದ ಅಧ್ಯಯನಗಳಾಗಿಲ್ಲ ಎನ್ನಬಹುದು. ಉದಾಹರಣೆಗೆ, ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿಯ ಮಹಾಸಂಪುಟಗಳಲ್ಲಿ ಬಸವಣ್ಣನವರ ವಚನಗಳನ್ನು ಪರಿಚಯಿಸುವಾಗ, ‘ಭಕ್ತಸ್ಥಲ’, ಕ್ಕೆ ಸಂಬಂಧಿಸಿದ, ‘ಪಿಂಡಸ್ಥಲ’, ‘ಪಿಂಡಜ್ಞಾನಸ್ಥಲ’, ಈ ಮುಂತಾದ ಹದಿನಾಲ್ಕು ಉಪಶೀರ್ಷಿಕೆಗಳಡಿ ವಚನಗಳನ್ನು ಹೊಂದಿಸಲಾಗಿದೆ. ಇದೇ ಬಗೆಯ ಉಪಶೀರ್ಷಿಕೆಗಳನ್ನು ‘ಮಹೇಶ್ವರಸ್ಥಲ’, ‘ಪ್ರಸಾದಿಸ್ಥಲ’, ‘ಪ್ರಾಣಲಿಂಗಸ್ಥಲ’, ‘ಶರಣಸ್ಥಲ’, ‘ಐಕ್ಯಸ್ಥಲ’, ಮುಂತಾದವುಗಳನ್ನು ಹೊಂದಿಸುವಾಗಲೂ ಕಾಣಬಹುದಾಗಿದೆ. ಇದು ಸಾಂಪ್ರದಾಯಿಕ ವರ್ಗೀಕರಣ. ಕೆ.ಸಿ. ಶಿವಪ್ಪನವರ ‘ವಚನದರ್ಶನ’ವು ಈ ಸಾಂಪ್ರದಾಯಿಕ ಚೌಕಟ್ಟನ್ನು ದಾಟಿ, ಸುಮಾರು 21,000ವಚನಗಳನ್ನು 18 ಶೀರ್ಷಿಕೆಗಳಡಿ ತಂದುಕೊಂಡಿದೆ. ವಚನಸಾಗರಕ್ಕಿಳಿದು ವಚನಗಳನ್ನು ಆಯ್ಕೆಮಾಡಿಕೊಳ್ಳುವಾಗ ಮತ್ತು ವರ್ಗೀಕರಿಸುವಾಗ,ಈ ಕೃತಿಯ ಸಂಪಾದಕರು ಸಾಕಷ್ಟು ಬಾರಿ ವಚನಗಳನ್ನು ಅಧ್ಯಯನ ಮಾಡಿರುವುದು ಸುಸ್ಪಷ್ಟ. ವಚನ, ಪರವಸ್ತು, ಸಂಸಾರ, ಮನಸ್ಸು, ಶರಣಾಗತಿ, ಅರಿವು, ಭಕ್ತಿ, ಶಿವಪಥ, ಅನುಭಾವ, ಶರಣ, ಶರಣಸತಿ-ಲಿಂಗಪತಿ, ಲಿಂಗಾಂಗ ಸಾಮರಸ್ಯ, ಶಿವಯೋಗ, ಕಾಯಕ ದಾಸೋಹ, ಜೀವನ ಮೌಲ್ಯ, ನಡೆ-ನುಡಿ, ಆತ್ಮ ನಿರೀಕ್ಷಣೆ, ಸಾಮಾಜಿಕ ಚಿಂತನೆ, ಎಂಬವುಇವರು ನಿರ್ಧಸಿರುವ 18 ಶೀರ್ಷಿಕೆಗಳು. ಈ ವರ್ಗೀಕರಣವನ್ನು ಪ್ರಶ್ನಿಸುವುದು ಸುಲಭ, ಆದರೆ ವ್ಯಕ್ತಿಗತ ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಗೌರವಿಸುವುದು ಉಚಿತ.ಸಾಂಪ್ರದಾಯಿಕ ಜಿಜ್ಞಾಸೆಕಾರರಿಗೂ ಮತ್ತು ಆಧುನಿಕ ಅಭ್ಯಾಸಿಗಳಿಗೂವಚನಗಳನ್ನು ವರ್ಗೀಕರಿಸುವ ವಿಧಾನವು ಒಂದು ಸವಾಲಿನ ಕ್ರಿಯೆ.ಏಕೆಂದರೆ ಬಹುತೇಕ ವಚನಗಳ ಹರವು ಒಂದೇ ಚೌಕಟ್ಟಿಗೆ ನಿಲುಕಲಾರದಷ್ಟು ವೈಶಿಷ್ಟಮಯವಾಗಿರುವುದು. ಈ ಕಾರಣದಿಂದಾಗಿ ಒಬ್ಬರಿಗೆಸರಿ ಎನಿಸಿದ ವರ್ಗೀಕರಣವು ಇನ್ನೊಬ್ಬರಿಗೆ ಸರಿ ಎನಿಸಲಾರದ ಸಂಭಾವ್ಯ ಸಾಧ್ಯ. ಶಿವಪ್ಪನವರಿಗೆ ಇದರ ಅರಿವಿದೆ. ಕೆಲವು ವಚನಗಳನ್ನು ಒಂದಕ್ಕಿಂತ ಹೆಚ್ಚು ಶೀರ್ಷಿಕೆಯಡಿ ತಂದುಕೊಳ್ಳಬೇಕಾದ ಅನಿವಾರ್ಯತೆಯನ್ನು ಅವರುಸ್ವತಃ ಮನಗಂಡಿದ್ದಾರೆ.ಈ 18ಶೀರ್ಷಿಕೆಗಳಡಿ ಅವರು ತಂದುಕೊಂಡಿರುವ ಒಟ್ಟು ವಚನಗಳ ಸಂಖ್ಯೆ 1026; ಇವನ್ನು ರಚಿಸಿದವರ ಸಂಖ್ಯೆ 217; ಇವು ರಚನೆಗೊಂಡ ಕಾಲವ್ಯಾಪ್ತಿ, 1100 ರಿಂದ 1855. ವಚನಗಳನ್ನುಯಾಂತ್ರಿಕವಾಗಿ ವರ್ಗೀಕರಿಸದೆ, ಅವು ಒಂದೊಂದು ಶೀರ್ಷಿಕೆಯಡಿ ನಿಲ್ಲಲು ಇರುವ ಕಾರಣಗಳನ್ನು ಪ್ರಸ್ತಾವನೆಯಲ್ಲಿ ಶಿವಪ್ಪನವರು ಮಾಡಿರುವರು. ಈ ವಿದ್ವತ್‍ಪೂರ್ಣ ಪ್ರಸ್ತಾವನೆಯು ವಚನಗಳನ್ನು ಮಾತ್ರವಲ್ಲ, ಕಳೆದೊಂದು ಶತಮಾನದಲ್ಲಿ ಈ ಕ್ಷೇತ್ರದಲ್ಲಿ ದುಡಿದವರ ಮಾರ್ಮಿಕ ಮಾತುಗಳನ್ನೂ ನೆನಪಿಸಿಕೊಡುವುವು.ಈ ಮೂಲಕ ಪ್ರಾತಃಸ್ಮರಣೀಯರ ಹಾಗೂ ಕಾಲಾನಂತರದಲ್ಲಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡ ವಿದ್ವಾಂಸರ ವಿಶ್ಲೇಷಣೆಗಳನ್ನು ನಮಗೆ ಲಭ್ಯಗೊಳಿಸಿರುವರು. ಅಂದರೆ ವಚನಗಳನ್ನು ಮಾತ್ರವಲ್ಲ, ವಚನಾಧ್ಯಯನವು ಬೆಳೆದು ಬಂದ ದಾರಿಯನ್ನೂ ಇವರು ತೋರಿಸಿಕೊಟ್ಟಿರುವರೆನ್ನಬಹುದು. ಮೊದಲ ಅಧ್ಯಾಯದ ‘ವಚನ’ ಶೀರ್ಷಿಕೆಗೆ ಶಿವಪ್ಪನವರು ಬರೆದ ಎಂಟುಪುಟಗಳ ಪ್ರಸ್ತಾವನೆಯಲ್ಲಿ, ಶಿ.ಶಿ.ಬಸವನಾಳ, ಎಂ.ಎಂ. ಕಲುಬುರ್ಗಿ, ಎಂ.ಆರ್.ಶ್ರೀನಿವಾಸ್‍ಮೂರ್ತಿ,ಎಸ್.ವಿ.ಪರಮೇಶ್ವರ ಭಟ್ಟ, ರಂ.ಶ್ರೀ.ಮುಗಳಿ, ಮತ್ತು ಎಚ್. ತಿಪ್ಪೆರುದ್ರಸ್ವಾಮಿಯವರ ನುಡಿಮುತ್ತುಗಳು ಸೇರಿಕೊಂಡಿವೆ. ‘ಅಂತರಂಗದ ಯಾವುದೋ ಉತ್ಕಟಾವಸ್ಥೆಯಲ್ಲಿ ಹೊರಬಂದ ಶಬ್ಧರೂಪದ ಅನುಭವ ದ್ರವ್ಯ’ವೇ ವಚನ; ‘ಗದ್ಯದ ನಿರರ್ಗಳತೆ ಇಲ್ಲದಿದ್ದರೂ ಅದರ ಸರಳತೆ ಇದೆ, ಪದ್ಯ ಕ್ರಮಬದ್ಧ ಛಂದೋಗತಿ ಇಲ್ಲದಿದ್ದರೂ ಅದರ ಲಯವಿದೆ; ಇವನ್ನು ಬಿಡಿಯಾಗಿ ನೋಡಿದರೆ ಮುತ್ತಿನ ಬೆಲೆ,ಸರಳಗೊಳಿಸಿದರೆ ಮುತ್ತಿನ ಹಾರದ ಬೆಲೆ’ ; ‘ವಚನಸಾಹಿತ್ಯ ಎರವಲು ತಂದದ್ದಲ್ಲ, ಅದು ಕನ್ನಡದ ಸ್ವಾರ್ಜಿತಸ್ವತ್ತು’; ವಚನ ‘ಮತ್ರ್ಯಲೋಕದವರ ಮನದ ಮೈಲಿಗೆ ಕಳೆಯುವ ಅನುಪಮ ಸಾಧನ’, ಎಂಬವು ಅವರ ಕೆಲವು ಮಾತುಗಳು. ಇವನ್ನು ವಿಸ್ತರಿಸಿ, ಶಿವಪ್ಪನವರುಇನ್ನೂಕೆಲವು ಮೌಲ್ಯಯುತ ಮಾತುಗಳನ್ನು ಸೇರಿಸಿದ್ದಾರೆ.‘ಮೊಗೆದಷ್ಟು ನೀರುಕೊಡುವ ಬತ್ತದ ಚಿಲುಮೆಯಂತೆ, ಅಗೆದಷ್ಟು ಹೊಸ ಹೊಸ ಅರ್ಥ ಕೊಡುವ ಸಂಜೀವಿನಿ ವಾಣಿಯ ಹಾಗೆ ವಚನ ನುಡಿಗಡಣ ಮನುಜಮನದ ಸ್ಪಂದನೆಗಳ ಸಿರಿಕಣಜ’; ‘ಈ ವಿಶಿಷ್ಟ ಗುಣಗಳೇ ವಚನರಚನೆಯನ್ನು ಬರಿಯ ಬಣಬೆಮಾತಿನ ಮಾಲೆಯಾಗಿಸದೆ, ತತ್ವಬೋಧನೆಯ ಸಿದ್ಧಾಂತ ಗ್ರಂಥವಾಗಿಸಿದೆ’;‘ಅತಿ ಕಡಿಮೆ ಶಬ್ಧಗಳಲ್ಲಿ ಗಹನ ವಿಷಯಗಳ ಕಲಾತ್ಮಕ ನಿರೂಪಣೆ ಮುಂತಾದವಿಶಿಷ್ಟ ಗುಣವಿಶೇಷಗಳು ವಚನಗಳಲ್ಲಿ ಮೇಳೈಸಿವೆ’; ಹೊಸತನದ ಕಾಲಿನಿಂದ, ತೀವ್ರತೆಯ ಓಘದಿಂದವಚನಗಳು ಹೆಚ್ಚು ಜನಪ್ರಿಯತೆ, ಮನ್ನಣೆಗಳಿಸಿರುವುದೇನೂ ಅಚ್ಚರಿಯಲ್ಲ’, ಎಂಬವು ಅವುಗಳಲ್ಲಿ ಕೆಲವು. ವಚನ ಸಾಹಿತ್ಯವನ್ನು ಕೊಂಡಾಡಿದರೆ ಸಾಲದು ಅದರ ಆಳಕ್ಕಿಳಿದುಅಲ್ಲಿ ಅಡಗಿರುವ ತತ್ವಗಳನ್ನು ಕಂಡುಕೊಳ್ಳಬೇಕಾದ ಹೊಣೆಗಾರಿಕೆಯನ್ನು ಈ ಮಾತುಗಳು ಎಚ್ಚರಿಸಿಕೊಡುವುವು. ಈ ಗ್ರಂಥ ರಚನೆಯ ಮೂಲಕ ವಚನಾಧ್ಯಯನ ಕ್ಷೇತ್ರಕ್ಕೆ ಶಿವಪ್ಪನವರು ಮೊದಲಹೆಜ್ಜೆ ಇಟ್ಟಿರುವರೆಂಬ ಭಾವನೆ ಬಂದರೂಜೀವನದುದ್ದಕ್ಕೂ ವಚನಗಳನ್ನು ಕೇಳುತ್ತಾ, ವ್ಯಾಖ್ಯಾನಿಸುತ್ತಾ, ಗುಣುಗುಣಿಸುತ್ತಾ, ಇವರು ಬೆಳೆದವರೆಂಬುದನ್ನು ಮರೆಯುವಂತಿಲ್ಲ. ಇಷ್ಟುಮಾತ್ರವಲ್ಲ, ಈ ಸೊಡರಿನಲ್ಲಿಯೇ ತಮ್ಮ ಕಾವ್ಯಶೈಲಿಯನ್ನು ರೂಪಿಸಿಕೊಂಡು ಕನ್ನಡದ ಹೆಸರಾಂತ ಕವಿಗಳಲ್ಲಿ ಒಬ್ಬರಾಗಿ ಅವರು ನಮ್ಮ ಮುಂದೆ ನಿಂತಿರುವರು,ಸುಮಾರು 60 ವರ್ಷಗಳ ಹಿಂದೆ ಮೈಸೂರಿನಲ್ಲಿ ನನ್ನ ಸಹಪಾಟಿಯಾಗಿ, ಸಂಖ್ಯಾಶಾಸ್ತ್ರದಲ್ಲಿ ಎಂ.ಎ. ಪಡೆದುಕೊಂಡ ಶಿವಪ್ಪನವರು, ಆಡಳಿತಗಾರರಾಗಿ, ಸಂಪಾದಕರಾಗಿ, ಭಾಷಾಂತರಕಾರರಾಗಿ, ಜೀವನಚರಿತ್ರೆಕಾರರಾಗಿ, ಪ್ರಬಂಧಕಾರರಾಗಿ,ಸಂಗೀತಗಾರರಾಗಿ, ಛಾಯಚಿತ್ರಗಾರರಾಗಿ, ಬೆಳೆದದ್ದಕ್ಕಿಂತ ಹೆಚ್ಚು ಎತ್ತರಕ್ಕೆ ಬೆಳೆದಿರುವುದು ಕವಿಗಳಾಗಿ. ನಮ್ಮ ಓದಿನಕಾಲದ ಪ್ರಭಾವವೇ ಹಾಗಿತ್ತು. ಕವಿ ಕುವೆಂಪು ಅವರು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ ನಂತರ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದೂ, ನರಸಿಂಹಸ್ವಾಮಿಯವರ ಭಾವಗೀತೆಗಳನ್ನು ಮೈಸೂರಿನ ಓಣಿ ಓಣಿಗಳಲ್ಲಿ ಹಾಡುತ್ತಿದ್ದುದೂಈ ಅವಧಿಯಲ್ಲಿ. 1950-70ರ ದಶಕಗಳಲ್ಲಿ, ನವ್ಯಕಾವ್ಯಮಾರ್ಗದ ಪ್ರಭಾವದಡಿ ಭಾವಗೀತೆ ಸೊರಗತೊಡಗಿತ್ತೆಂಬ ಒಂದು ಅಭಿಮತವಿದೆ. ಆಗ ಕೆ.ಎಸ್. ನರಸಿಂಹಸ್ವಾಮಿ, ಸು.ರಂ.ಎಕ್ಕುಂಡಿ, ಜಿ.ಎಸ್.ಎಸ್, ಚನ್ನವೀರ ಕಣವಿ, ಮುಂತಾದವರು ಮಾತ್ರ ಸರಳವಾಗಿ ಬರೆದು, ಕಾವ್ಯಾಸಕ್ತರ ಗೇಯ ಕವಿತೆ ರಚನೆಗಳಿಗೆ ಇಂಬುಕೊಡುತ್ತಿದ್ದರು. ಈ ಹಂತದಲ್ಲಿ ಕಾವ್ಯಕ್ಷೇತ್ರ ಪ್ರವೇಶಿಸಿದ ಶಿವಪ್ಪನವರು ನವ್ಯಸಾಹಿತ್ಯ ಚಳುವಳಿಯ ಭಾಗವಾಗದೆ, ಭಾವಗಮ್ಯವಾದ, ಗೀತಾತ್ಮಕ ಲಯವುಳ್ಳ ಕಾವ್ಯಕ್ಕೆ ಮಾರುಹೋದರು. ಒಲುಮೆ, ಚಿಂತನೆ, ಪ್ರಕೃತಿ, ದೈವ ಮತ್ತು ಅನುಭಾವ ಕುರಿತ 1085 ಕವಿತೆಗಳ ಎರಡು ಸಂಪುಟಗಳನ್ನು ಹೊರತಂದು ಕಾವ್ಯಲೋಕದ ಗಮನವನ್ನು ಸೆಳೆದರು. ಮುಂದೆ ‘ಮುದ್ದುರಾಮನ’ ಅಂಕಿತದಲ್ಲಿ ಮೊದಲು 2,000 ಚೌಪದಿಗಳನ್ನು ರಚಿಸಿ, ನಂತರ 9,000 ಚೌಪದಿಯನ್ನು ಸೇರಿಸಿ,ಕಾವ್ಯಲೋಕವನ್ನು ದಂಗುಬಡಿಸಿದರು ಮಾತ್ರವಲ್ಲ, ಪ್ರೇಮಕವಿಗಳಾಗಿ ಪ್ರಸಿದ್ಧಿ ಪಡೆದರು. ಇವರ ಕಾವ್ಯಗಳು ಪ್ರಭಾವೀಸ್ವರಸಂಯೋಜಕರ ಗಮನ ಸೆಳೆದವು. ಇದರಿಂದಾಗಿ ಅನೇಕ ಧ್ವನಿಸುರುಳಿಗಳು ಹೊರಬಂದು ಜನಪ್ರಿಯಗೊಂಡವು. ಇವರ ಗೀತೆಗಳನ್ನು ಸ್ವರಸಂಯೋಜಿಸಿದವರಲ್ಲಿ ವಿಜಯಭಾಸ್ಕರ್, ಸಿ.ಅಶ್ವತ್ಥ, ಮೊದಲಾದವರನ್ನೊಳಗೊಂಡ ಸುಮಾರು ಡಜನ್ ಪ್ರಸಿದ್ಧ ಹೆಸರುಗಳಿವೆ; ಕಂಠಶ್ರೀ ನೀಡಿದವರಲ್ಲಿ ವಾಣಿಜಯರಾಂ, ಶ್ರೀ ಎಸ್.ಪಿ. ಬಾಲಸುಬ್ರಮಣ್ಯಂ ಒಳಗೊಂಡ 17 ಪ್ರಖ್ಯಾತ ಗಾಯಕರಿರುವರು. ವಚನಗಳ ಈ ವೈಶಿಷ್ಟಪೂರ್ಣ ಸಂಪಾದನಾಕಾರ್ಯಕ್ಕೆ ಸ್ಪೂರ್ತಿ ಒದಗಿಸಿದ ಶ್ರೀಶ್ರೀ ಸಿದ್ಧೇಶ್ವರ ಸ್ವಾಮಿಗಳ ಇಷ್ಟಾರ್ಥವನ್ನು ಶಿವಪ್ಪನವರು ಸಮರ್ಥವಾಗಿ ಪೂರೈಸಿಕೊಟ್ಟಿರುವರಲ್ಲದೆ, ವಚನಪ್ರಿಯರ, ಕನ್ನಡಕವಿಗಳ, ಸಂಶೋಧಕರ ಮೆಚ್ಚುಗೆಯನ್ನು, ನಾನು ಪಡೆದಷ್ಟು ಪ್ರಮಾಣದಲ್ಲಿ ಪಡೆಯುವರೆಂಬ ಭರವಸೆ ನನ್ನದಾಗಿದೆ.

-ಷ. ಶೆಟ್ಟರ್ (ಮುನ್ನುಡಿಯಿಂದ)

ಅಭಿನವ24 products on store
Payment types
Create your own online store for free.
Sign Up Now