ಸ್ವಾಯತ್ತ ಪ್ರಜ್ಞೆ (ಸಮಕಾಲೀನ ಸಮಾಜಕ್ಕೊಂದು ಸಾಹಿತ್ಯಕ ಸ್ಪಂದನೆ)
ಸ್ವಾಯತ್ತ ಪ್ರಜ್ಞೆ (ಸಮಕಾಲೀನ ಸಮಾಜಕ್ಕೊಂದು ಸಾಹಿತ್ಯಕ ಸ್ಪಂದನೆ)
ಸ್ವಾಯತ್ತ ಪ್ರಜ್ಞೆ (ಸಮಕಾಲೀನ ಸಮಾಜಕ್ಕೊಂದು ಸಾಹಿತ್ಯಕ ಸ್ಪಂದನೆ)
Share:
₹180
Ships within 3 days
SKU :
100
Description

ಲೇಖಕರು: ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಕಾಶನ: ಅಭಿನವ, ಬೆಂಗಳುರು ಬೆಲೆ: 200/- ರಿಯಾಯಿತಿ: 10% ......................... ಇವತ್ತಿನ ನಮ್ಮ ನೋಟ, ನಿಲುವು, ನಂಬಿಕೆಗಳು ಹಲವು ವಿಚಾರ, ಚಿಂತನೆಗಳಿಂದ ಪ್ರೇರೇಪಿತವಾಗುತ್ತಿವೆ. ಆದರೆ ಅಂಥ ಪ್ರಭಾವ'ದಲ್ಲಿಯೂಸ್ವಂತಿಕೆ'ಯನ್ನು ಉಳಿಸಿಕೊಳ್ಳುವುದು. ಹದ' ಕಾಪಿಟ್ಟುಕೊಳ್ಳುವುದು, ಹೊಸ ಕಾಲಕ್ಕೆ ನಿಚ್ಚಳವಾಗಿಸ್ಪಂದಿಸು'ವುದು ಚಾಲೆಂಜಿನ ಸಂಗತಿ. ನಾಗರಾಜ ಹೆಗಡೆ ಅವರ ಕವಿತೆಗಳು ಈ ಮಿತಿಗಳನ್ನು ದಾಟಿವೆ. ನಾಗರಾಜರು ಮನೆ ಬಾವಿಯಲ್ಲಿ ನೀರನ್ನು ಸುಲಭವಾಗಿ ಹೇಗೆ ಸೇದಬಹುದೋ ಹಾಗೆಯೇ ಕೊರೋನಾದಿಂದ ಬಚಾವಾಗುವ ಉಪಾಯವನ್ನು ಕವನಗಳಲ್ಲಿ ಹುಡುಕುತ್ತಾರೆ. ಕಾಶ್ಮೀರ ಕಣಿವೆಯಂತೆಯೇ ಬಾಳೆಗದ್ದೆಯ ವಿವರಗಳು ಕವಿತೆಯ ವಸ್ತುಗಳಾಗುತ್ತವೆ. ಕಣ್ಣಂಚಿನಲ್ಲೇ ಉಳಿವ ಕಡಲು, ಜಲಪಾತದಂಚಿನಲಿ ಮೈಮರೆತು ಪ್ರಪಾತದ ಪಾಲಾಗುವ ಸೆಲ್ಫಿ, ಮಮತೆ ಸಮತೆ ಪ್ರಕೃತಿಯಾಗಿ ನಮ್ಮ ಮಡಿಲನ್ನು ತುಂಬಲೆಂಬ ಆಶಯ, ಕಲಾತ್ಮವಾಗುವ ಚಿಟ್ಟಾಣಿ - ಎಷ್ಟೊಂದು ಚಿತ್ರಗಳ ಮೆರವಣಿಗೆ... ಗ್ರಾಮೀಣ ಅನುಭವದಿಂದ ನಗರಕೇಂದ್ರಿತ ಅನುಭವ ಜಗತ್ತಿಗೆ ಕನ್ನಡ ಸಾಹಿತ್ಯ ಹೊರಳಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾಗರಾಜ ಹೆಗಡೆ ಅವರ ಕವನ ಸಂಕಲನ ಪ್ರಕಟವಾಗುತ್ತಿದೆ. `ಸಣ್ಣ ಬೆಂಕಿ' ನಮ್ಮ ಬದುಕಿಗೆ ಬೇಕಾದ ಎಚ್ಚರವನ್ನು, ಆತ್ಮೀಯತೆಯನ್ನೂ, ಹದವನ್ನು, ಅನನ್ಯತೆಯನ್ನು ಕಾಣಿಸುತ್ತದೆ. ಲಕ್ಷ್ಮೀೀಶ ತೋಳ್ಪಾಡಿಯವರ ಪರಿಭಾಷೆಯಲ್ಲಿ ಹೇಳುವುದಾದರೆ - ಮರದಲ್ಲಿರುವ ಬೆಂಕಿ ಚಿಗುರಾಗಿ ಅರಳುತ್ತದೆ.

ಅಪಾರವೆನ್ನಿಸುವಂಥ ಪರಮತಸಹಿಷ್ಣುತೆಯನ್ನು ಕಲಿತು ಬಂದ ನಮ್ಮ ದೇಶದಲ್ಲಿ ಈಗ ಕಂಡುಬರುತ್ತಿರುವ ಭಿನ್ನಮತದ ಬಗ್ಗೆ ತಾತ್ಸಾರ, ಪರಮತದ ಬಗ್ಗೆ ಅಸಹನೆ - ಇವು ದಿಗಿಲುಗೊಳಿಸುತ್ತವೆ. ತನಗಿಂತ ಬೇರೆಯಾಗಿ ಯೋಚಿಸುವವನನ್ನು, ತನಗಿಂತ ಭಿನ್ನವಾದ ಶ್ರದ್ಧೆಯುಳ್ಳವನನ್ನು, ತನಗಿಂತ ಬೇರೆಯಾಗಿ ಬದುಕುವಂಥವನನ್ನು ತದಕಿಹಾಕುತ್ತೇವೆ, ಹೊಸಕಿಹಾಕುತ್ತೇವೆ, ನಿರ್ನಾಮ ಮಾಡುತ್ತೇವೆ ಎಂಬ ಮಾತು ಈಗ ಎಲ್ಲ ಕಡೆಗಳಲ್ಲೂ ಕೇಳಿಬರುತ್ತಿದೆ. ಇಂಥವರ ಕಾರ್ಯಮಾರ್ಗವೆಂದರೆ ಗುಂಪು ಕಟ್ಟಿಕೊಂಡು ಪಶುಬಲದ ಪ್ರದರ್ಶನ ನಡೆಸುವುದು, ಅದರ ಪ್ರಯೋಗ ಮಾಡುವುದು. ಈ ಪಶುಬಲದ ವಿರುದ್ಧವಾಗಿ ನಿಲ್ಲುವ ಯಾವ ಶಕ್ತಿಯೂ ಇಲ್ಲವಾಗಿ ನಾವೆಲ್ಲ ನಿಷ್ಕ್ರಿಯವಾಗಿ ಸ್ವಾತಂತ್ರ್ಯ, ಸಮಾನತೆ, ಸಮಾಜವಾದ ಇತ್ಯಾದಿ ದೊಡ್ಡ ದೊಡ್ಡ ಮಾತುಗಳನ್ನು ಉರುಳಿಸುತ್ತಿದ್ದೇವೆ. ಈ ಎಲ್ಲದರ ನಡುವೆ ನಷ್ಟವಾಗುತ್ತಿರುವುದು ಮಾನವತೆಯ ಅತ್ಯಂತ ಕೋಮಲವೂ ಸೂಕ್ಷ್ಮವೂ ಅಮೂಲ್ಯವೂ ಆದ ವ್ಯಕ್ತಿ ಸ್ವಾತಂತ್ರ್ಯ. ಭಯ, ಗೊಂದಲ, ಕರಾಳ ಪಶುಬಲಪ್ರದರ್ಶನದ ರಾಕ್ಷಸ ವಾತಾವರಣದಲ್ಲಿ ಮಾನವತೆಯ ಶಾಂತ ಮಂದ್ರಧ್ವನಿ ಅಡಗಿಹೋಗುತ್ತಿದೆ. ವ್ಯಕ್ತಿತ್ವ ವಿಕಾಸಕ್ಕೆ ಅತ್ಯಗತ್ಯವಾದ, ಭಿನ್ನಮತದ ಅಭಿವ್ಯಕ್ತಿಗೆ ಅಗತ್ಯವಾದ ತಕ್ಕ ವಾತಾವರಣವನ್ನು ಮತ್ತೆ ಸೃಷ್ಟಿಮಾಡುವುದೇ ನಾವು ಈಗ ಕೈಗೊಳ್ಳಬೇಕಾದ ಅತಿ ಜರೂರಿನ ಕೆಲಸ. ಈ ಕೆಲಸವನ್ನು ನಾವು ತ್ರಿಕರಣಪೂರ್ವಕವಾಗಿ ಕೈಗೆತ್ತಿಕೊಳ್ಳದೇ ಹೋದರೆ ಈಗಿರುವ ಪ್ರಜಾಪ್ರಭುತ್ವದ ಹೊರಗೆರೆಯೂ ಮಾಯವಾಗಿ ದುರ್ಮದದ, ಅಧಿಕಾರಲಾಲಸೆಯ, ರಾಕ್ಷಸೀ ಸರ್ವಾಧಿಕಾರ ಪ್ರಭುತ್ವ ಪಟ್ಟಕ್ಕೆ ಬರಲು ಹೆಚ್ಚು ದಿನಗಳಿಲ್ಲ. -ಗೋಪಾಲಕೃಷ್ಣ ಅಡಿಗ

ಇತ್ತೀಚೆಗೆ ನಾವು ಎದುರಿಸುತ್ತಿರುವ ಸೂಕ್ಷ್ಮವಾದ ಹಾಗೂ ಬಹುಮುಖ್ಯವಾದ ಆತಂಕವೆಂದರೆ ಪ್ರಭುತ್ವ ಸದ್ದಿಲ್ಲದೆ ಸ್ವಾಯತ್ತತೆಯ ಮೇಲೆ ಆಕ್ರಮಣ ನಡೆಸುತ್ತಿರುವುದು. ಸ್ವತಂತ್ರವಾಗಿ ಆಲೋಚಿಸುವ ಸಮುದಾಯದ ದನಿ ಅಡಗಿಸುವ ಪ್ರಯತ್ನ ಮಾಡುತ್ತಿರುವುದು. ಪ್ರಜಾಪ್ರಭುತ್ವದ ಮೂಲ ಶಕ್ತಿಯೇ ಸ್ವಾಯತ್ತತೆ. ನಮ್ಮ್ಮ ಅನೇಕ ಸಾರ್ವಜನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಬಂದಿವೆ. ಸರಿ ತಪ್ಪುಗಳನ್ನು ವಿವೇಚಿಸಿ ಚರ್ಚಿಸುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬಂದಿವೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಭುತ್ವ ಈ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತಿದೆ. ಪ್ರಭುತ್ವದ ಈ ಪ್ರಯತ್ನಕ್ಕೆ ಬಂಡವಾಳಶಾಹಿ ಕೈ ಜೋಡಿಸಿದೆ. ಇವೆರಡೂ ಪ್ರಜಾಪ್ರಭುತ್ವದಲ್ಲಿ ಕೈ ಕೈ ಹಿಡಿದು ಸಾಗುತ್ತಿವೆ…ಅಧಿಕಾರ ಕೇಂದ್ರಗಳಾದ ರಾಜಕೀಯ' ಹಾಗೂಧರ್ಮ' ಇವೆರಡೂ ಅಧೀನ ಮನೋಸ್ಥಿತಿಯನ್ನು ಪೋಷಿಸುವಂಥವು. ಪ್ರಶ್ನಿಸುವುದನ್ನು ಇವು ಸಹಿಸುವುದಿಲ್ಲ. ಸಾಹಿತ್ಯದ ಶಕ್ತಿಯೇ ಸ್ವಾಯತ್ತತೆ. ಈಗ ಈ ವಲಯವೂ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆಯೇ? -ನರಹಳ್ಳಿ ಬಾಲಸುಬ್ರಹ್ಮಣ್ಯ

ಅಭಿನವ24 products on store
Payment types
Create your own online store for free.
Sign Up Now