ಸಿಗ್ಮಂಡ್ ಫ್ರಾಯ್ಡ್
ಸಿಗ್ಮಂಡ್ ಫ್ರಾಯ್ಡ್ಸಿಗ್ಮಂಡ್ ಫ್ರಾಯ್ಡ್
ಸಿಗ್ಮಂಡ್ ಫ್ರಾಯ್ಡ್
Share:
₹135
Ships within 3 days
SKU :
100
Description

ಲೇಖಕರು: ಎಂ. ಬಸವಣ್ಣ ಬೆಲೆ: 150/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು .................................... ಕನಸು ಎಂದರೆ ಎಲ್ಲರಿಗೂ ಏನೋ ಒಂದು ತರಹದ ಕುತೂಹಲ, ಆಶ್ಚರ್ಯ, ಒಮ್ಮೊಮ್ಮೆ ಭಯ ಕೂಡ. ಆದುದರಿಂದಲೇ ಕನಸು ಎಂದರೇನು? ಕನಸು ಏಕೆ ಬೀಳುತ್ತದೆ? ಕನಸಿಗೆ ಏನಾದರು ಅರ್ಥವಿದೆಯೆ? ಎನ್ನುವ ಪ್ರಶ್ನೆಗಳನ್ನು ಮನುಷ್ಯನಿಗೆ ಬುದ್ಧಿ ಬಂದ ಕಾಲದಿಂದಲೂ ಎಲ್ಲರೂ ಕೇಳುತ್ತಲೇ ಬಂದಿದ್ದಾರೆ. ದಾರ್ಶನಿಕರು, ವಿಜ್ಞಾನಿಗಳು, ಜನಪ್ರಿಯ ಬರಹಗಾರರು, ಹಾಗು ಕೆಲವು ಕನಸಿನ ವ್ಯಾಪಾರಿಗಳು, ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಲೂ ಬಂದಿದ್ದಾರೆ. ಅವರು ಕೊಡುವ ಕೆಲವು ಉತ್ತರಗಳು ವೈವಿಧ್ಯಮಯವಾಗಿವೆ, ಆಶ್ಚರ್ಯಕರವಾಗಿವೆ. ಕೆಲವರು ಕನಸು ಒಂದು ಅಲೌಕಿಕ ಅನುಭವವೆಂದಿದ್ದಾರೆ; ಮತ್ತೆ ಕೆಲವರು ಕನಸು ದೈವಿಕ ಅಭಿವ್ಯಕ್ತಿ, ಅದು ದೇವರು ನಮ್ಮೊಡನೆ ವ್ಯವಹರಿಸುವ ವಿಧಾನವೆಂದಿದ್ದಾರೆ. ಇನ್ನು ಕೆಲವರು ಸತ್ತ ನಮ್ಮ ಹಿರಿಯರು ನಮಗೆ ಬುದ್ಧಿ ಹೇಳಲು ಕನಸಿನಲ್ಲಿ ಬರುತ್ತಾರೆಂದಿದ್ದಾರೆ. ಕನಸು ಮುಂದಾಗುವುದನ್ನು ಸೂಚಿಸುವ ಭವಿಷ್ಯತ್ ವಾಣಿ ಎಂಬುದು ಬೇರೆ ಕೆಲವರ ಸ್ಪಷ್ಟ ಅಭಿಮತ. ನಾವು ನಿದ್ರಿಸುವಾಗ, ನಮ್ಮ ಆತ್ಮ ಲೋಕಸಂಚಾರಕ್ಕೆ ಹೋಗಿರುತ್ತದೆ, ಆಗ ಜರುಗುವ ಅನುಭವಗಳೇ ಕನಸು ಎಂಬುದು ಇನ್ನೊಂದು ವರ್ಗದವರ ಅಭಿಪ್ರಾಯ. ಕೆಲವು ಪ್ರಾಚೀನ ಜನಾಂಗದ ಜನರು, ಕನಸಿಗೂ ನಿಜ ಜೀವನಕ್ಕೂ ನಡುವೆ ವ್ಯತ್ಯಾಸವಿದೆ ಎಂಬುನ್ನು ನಂಬುವುದೇ ಇಲ್ಲ. ಒಂದು ಇನ್ನೊಂದರ ವಿಸ್ತರಿತ ಭಾಗವೆಂದು ತಿಳಿದು ವ್ಯವಹರಿಸುತ್ತಾರೆ. ಉದಾಹರಣೆಗೆ ಪೆರುಗ್ವೆ ದೇಶದಲ್ಲಿ, ಯಾರೊ ಒಬ್ಬ ತನ್ನನ್ನು ಅವಮಾನಿಸಿದಂತೆ ಕನಸು ಕಂಡ ವ್ಯಕ್ತಿ, ಎಚ್ಚರವಾದ ಮೇಲೆ, ಕನಸಿನಲ್ಲಿ ಬಂದು ಅವಮಾನಿಸಿದವನೊಡನೆ ಜಗಳಕ್ಕೆ ಹೋದ ನಿದರ್ಶನಗಳಿವೆ. ಬೋರ್ನಿಯೋ ದೇಶದಲ್ಲಿ, ತನ್ನ ಹೆಂಡತಿ ಬೇರೆ ಗಂಡಸಿನೊಡನೆ ಇದ್ದಂತೆ ಕನಸಿನಲ್ಲಿ ಕಂಡ ಗಂಡ, ಅವಳನ್ನು ಮನೆಯಿಂದ ಹೊರಗಟ್ಟಿದನೆಂದು ನಮೂದಾಗಿದೆ. ಕೆಲವು ದಾರ್ಶನಿಕರು, ಕನಸಿನ ಪ್ರಪಂಚವೇ ನಿಜವಾದುದು, ತಾವಿರುವುದೇ ಕನಸಿನ ಪ್ರಪಂಚದಲ್ಲಿ ಎಂದು ವಾದಿಸುತ್ತಾರೆ. ಕನಸಿಗೆ ಅರ್ಥ ಹೇಳಿ ಕಾಸು ಮಾಡುವ ಜನರು ನಮ್ಮ ನಡುವಿದ್ದಾರೆ ಎಂಬುದು ನಿಮಗೆಲ್ಲರಿಗೂ ಗೊತ್ತು. ಇವರೆಲ್ಲರೂ ಸೇರಿ ಕನಸಿನ ವಿಷಯವಾಗಿ ಗೊಂದಲ- ವನ್ನುಂಟುಮಾಡಿ, ನಮ್ಮ ತಲೆ ಕೆಡಿಸಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಯಾರು ಏನೇ ಹೇಳಿದರೂ, ಕನಸುಗಳ ಕುರಿತಾದ ಮುಖ್ಯ ಪ್ರಶ್ನೆಗಳಿಗೆ ನಿಖರವಾದ ಉತ್ತರ ನಮಗೆ ಇಂದಿನವರೆಗೂ ದೊರಕಿಲ್ಲವೆಂಬುದು ಸತ್ಯ. ಇಪ್ಪತ್ತನೆಯ ಶತಮಾನದ ಆರಂಭದವರೆಗೂ ಕನಸನ್ನು ಕುರಿತು ವೈಜ್ಞಾನಿಕ ಚಿಂತನೆ ನಡದೇ ಇರಲಿಲ್ಲ. ಅಲ್ಲಿಯವರೆಗೆ ಇದ್ದುದೆಲ್ಲಾ ಕನಸನ್ನು ವಿವರಿಸುವ ಮೂಢನಂಬಿಕೆಗಳು, ಕಟ್ಟುಕತೆಗಳು. ಕನಸುಗಳ ಬಗ್ಗೆ ವೈಚಾರಿಕ ಚಿಂತನೆ ಆರಂಭಗೊಂಡದ್ದು 1900ರಲ್ಲಿ, ಫ್ರಾಯ್ಡ್ ಪ್ರಕಟಿಸಿದ `ಸ್ವಪ್ನಾರ್ಥ ವಿವರಣೆ’ ಎಂಬ ಗ್ರಂಥದೊಂದಿಗೆ ಎಂಬುದು ಇತಿಹಾಸಕಾರರ ಅಭಿಮತ. ಆ ಪುಸ್ತಕ ಕನಸಿನ ವಿಚಾರವಾಗಿ ಜನರಲ್ಲಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಿ, ವೈಜ್ಞಾನಿಕ ಆಸಕ್ತಿಯನ್ನು ಕೆರಳಿಸುವಲ್ಲಿ ಯಶಸ್ವಿಯಾಯಿತು ಎಂಬುದರಲ್ಲಿ ಎರಡು ಮಾತಿಲ್ಲ. -ಎಂ. ಬಸವಣ್ಣ (ಒಳಪುಟಗಳಿಂದ)

ಅಭಿನವ24 products on store
Payment types
Create your own online store for free.
Sign Up Now