ವಸಾಹತು ಪ್ರಜ್ಞೆ ಮತ್ತು ವಿಮೋಚನೆ
ವಸಾಹತು ಪ್ರಜ್ಞೆ ಮತ್ತು ವಿಮೋಚನೆ
ವಸಾಹತು ಪ್ರಜ್ಞೆ ಮತ್ತು ವಿಮೋಚನೆ
Share:
₹50
Ships within 3 days
SKU :
95
Description

ಮೂಲ: ಗೂಗಿ ವಾ ಥಿಯಾಂಗೊ ಕನ್ನಡಕ್ಕೆ: ರಹಮತ್ ತರೀಕೆರೆ ಬೆಲೆ: 50/- ಪ್ರಕಾಶನ: ಅಭಿನವ, ಬೆಂಗಳೂರು ............................ ಗೂಗಿಯವರಂಥ ಚಿಂತಕನನ್ನು ಈಗ ಕನ್ನಡಿಸುವುದು ಹಲವು ಕಾರಣಗಳಿಗಾಗಿ ಸಂಗತವೆನಿಸಿದೆ. ಭಾಷೆಯ ಹೆಸರಿನಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಯಲ್ಲಿರುವ ನನಗೆ, ನಮ್ಮವೇ ಆದ ಅಧ್ಯಯನ ವಿಧಾನಗಳನ್ನು ಹುಡುಕುವ ಹಾಗೂ ನಮ್ಮ ಸಾಂಸ್ಕೃತಿಕ ಚಹರೆಯನ್ನು ಪಡೆದುಕೊಳ್ಳುವ ಕೆಲಸದಲ್ಲಿ ತೊಡಗಿರುವ ಮನಸ್ಸುಗಳೊಂದಿಗೆ, ಅವರ ಚಿಂತನೆ ಹಂಚಿಕೊಳ್ಳುವುದು ಸಾಂಸ್ಕೃತಿಕವಾಗಿ ಮುಖ್ಯ ವೆನಿಸಿದೆ. ಕನ್ನಡ ಸಾಹಿತ್ಯವು ಎಪ್ಪತ್ತರ ದಶಕದಿಂದ ದಲಿತ-ಬಂಡಾಯ ಸಾಹಿತ್ಯದ ಅಲೆಯನ್ನು ಕಂಡಿತು. ಎಂಬತ್ತರ ದಶಕದಲ್ಲಿ ಅದು ಮಾಗುತ್ತಿರುವಂತೆ ಕಂಡಿತು. ಆದರೆ ಈ ದಶಕದ ಅದರ ರೀತಿಯಲ್ಲಿ ವಿಚಿತ್ರ ಮಂಕುತನ ನಿಷ್ಕಿçಯತೆಗಳು ಕವಿದಿವೆ. ಇದಕ್ಕೆ ಕರ್ನಾಟಕದ ವಿದ್ಯಮಾನಗಳು ಎಷ್ಟು ಕಾರಣ, ಜಗತ್ತಿನ ವಿದ್ಯಮಾನಗಳೆಷ್ಟು ಕಾರಣ, ಈ ಸಾಂಸ್ಕೃತಿಕ ಚಳುವಳಿಯಲ್ಲಿರುವ ಲೇಖಕರು ಎಷ್ಟು ಕಾರಣ ಎಂಬ ಬಗ್ಗೆ ಸ್ವವಿಮರ್ಶೆ ಬೇಕಿದೆ. ಗೂಗಿಯಂಥ ಲೇಖಕರ ಜತೆಗಿನ ಸಂವಾದ ನಮ್ಮ ಸ್ವಚಿಂತನೆಗೆ ಕಾರಣವಾಗಬಹುದು ಎಂಬ ಆಸೆಪಟ್ಟಿದ್ದೇನೆ. ಇಂಗ್ಲಿಶೆAಬ ಉಣುಗೋಲು ಹಾರಲಾಗದವರನ್ನು ದಡ್ಡರೆಂದು ನಿರ್ಣಯಿಸುವ, ಇದಕ್ಕೆ ಬಹುಜನರ ಸಮ್ಮತಿಯನ್ನೂ ಪಡೆದಿರುವ ಕಲಿಕಾ ವ್ಯವಸ್ಥೆ ಜೀವಂತವಾಗಿರುವ ನಮ್ಮ ನಾಡಿನಲ್ಲಿ, ಪ್ರತಿವರ್ಷ ಲಕ್ಷಲಕ್ಷ ವಿದ್ಯಾರ್ಥಿಗಳನ್ನು ಹೊಡೆದು ಕೆಡವಲಾಗುತ್ತಿದೆ. ಇಂಗ್ಲಿಶಿನಲ್ಲಿ ತಪ್ಪಾಗಿ ಮಾತಾಡುವ ದೇಶೀಯರನ್ನು ಹೀನಾಯವಾಗಿ ಹಾಸ್ಯ ಮಾಡುವ ಮನಸ್ಸುಗಳು ನಮ್ಮ ಜತೆಯಲ್ಲಿ ಇವೆ. ಇವು ವಸಾಹತೀಕರಣದಿಂದ ಇನ್ನೂ ಬಿಡುಗಡೆಯಾಗದ ಗುಲಾಮೀ ಸಂಕೇತಗಳು. ಇಂಥ ತಾತ್ವಿಕ ಅಪ್ರಬುದ್ಧತೆಯು ಕನ್ನಡದ ಕಾವಲು ಕೆಲಸ ಮಾಡುವವರು ಎನ್ನಲಾಗುವ ಮಹನೀಯರಲ್ಲೂ ಇದೆ. ಶ್ರೀ ಪಾಟೀಲ ಪುಟ್ಟಪ್ಪನವರು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ ಈಚೆಗೆ ಬರೆದ ‘ಇಂಗ್ಲಿಶಿನ ದುರವಸ್ಥೆ’ ಎಂಬ ಅಂಕಣ ಬರಹ ಇದಕ್ಕೆ ಸಾಕ್ಷಿ. ಇಂಥದೇ ಪರಿಸರದಲ್ಲಿ ಹುಟ್ಟಿ ಬೆಳೆದ ಗೂಗಿ, ವಸಾಹತು ಭಾಷೆಯೊಂದು ದೇಶೀಯ ಭಾಷೆಗಳಲ್ಲಿ ಉಂಟು ಮಾಡುವ ಸ್ವದ್ವೇಷ ಪ್ರವೃತ್ತಿಯನ್ನು ಕುರಿತು ಮಾಡಿರುವ ಚಿಂತನೆಗಳು ಅನನ್ಯವಾಗಿವೆ; ನಮಗೆ ಅಗತ್ಯವಾಗಿ ಬೇಕಾಗಿವೆ. ಈ ಹೊತ್ತು ಆರ್ಥಿಕ ಉದಾರೀಕರಣದ ಹೆಸರಿನಲ್ಲಿ ಕರ್ನಾಟಕವನ್ನೂ ಒಳಗೊಂಡAತೆ ಇಡೀ ದೇಶವನ್ನು ಜಾಗತೀಕರಣದ ಹಾದಿಯಲ್ಲಿ ಹಾಯಿಸಲಾಗುತ್ತಿದೆಯಷ್ಟೆ. ನಮ್ಮ ಶಿಕ್ಷಣದ ಪಠ್ಯಕ್ರಮಗಳಿಂದ ಕರ್ನಾಟಕದ ಚರಿತ್ರೆಯನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿರುವುದು, ಈ ದಿಕ್ಕಿನ ಒಂದು ಸೂಚನೆ ಮಾತ್ರ. ಆಳದಲ್ಲಿ ದೇಶೀಯ ಚಹರೆಗಳನ್ನು ತೊಡೆದು ತೊಳೆಯುವುದು ಇದರ ಗುರಿಯಾಗಿದೆ. ಇಂಥ ಹಾದಿಯ ಅನಾಹುತಗಳ ಬಗ್ಗೆ ಗೂಗಿಯ ಅಭಿಪ್ರಾಯಗಳು ನಮಗೆ ರಾಜಕೀಯ ಅಗತ್ಯಗಳಾಗಿವೆ. ಗೂಗಿಯವರ ಈ ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ. ಎರಡು ಮತ್ತು ಮೂರನೇ ಅಧ್ಯಾಯಗಳಲ್ಲಿ ಆಫ್ರಿಕದ ರಂಗಭೂಮಿ ಮತ್ತು ಕಥನ ಸಾಹಿತ್ಯವನ್ನು ನಿರ್ದಿಷ್ಟ ವಾಗಿಟ್ಟುಕೊಂಡ ಚರ್ಚೆ ಇದೆ. ಆದರೆ ಮೊದಲನೇ ಅಧ್ಯಾಯದಲ್ಲಿ(ದಿ ಲಾಂಗ್ವೇಜ್ ಆಫ್ ಆಫ್ರಿಕನ್ ಲಿಟರೇಚರ್) ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ತಾತ್ವಿಕ ಚಿಂತನೆಗಳಿವೆ. ಇವು ಕನ್ನಡಕ್ಕೂ ಕರ್ನಾಟಕಕ್ಕೂ ಅನ್ವಯಗೊಳ್ಳುವಂಥವು. ಹೀಗಾಗಿ ಈ ಅಧ್ಯಾಯವನ್ನು ಮಾತ್ರ ಅನುವಾದಿಸಿದ್ದೇನೆ, ಕೊನೆಯ ಅಧ್ಯಾಯದ(ದಿ ಕ್ವೆಸ್ಟ್ ಫಾರ್ ರೆಲವನ್ಸ್) ಕೊನೆಯ ಭಾಗವು, ಇಡೀ ಪುಸ್ತಕದ ಸಾರ ಭಾಗವಾಗಿರುವಂತೆ ಕಂಡಿದ್ದರಿAದ ಅದನ್ನು ಸೇರಿಸಿದ್ದೇನೆ. -ರಹಮತ್ ತರೀಕೆರೆ (ಪ್ರಸ್ತಾವನೆಯಿಂದ)

ಅಭಿನವ24 products on store
Payment types
Create your own online store for free.
Sign Up Now