ತಾಳಿಕೋಟೆಯ ಕದನದಲ್ಲಿ (ಕಾದಂಬರಿ) + ಪಾರಿವಾಳಗಳು (ಲಲಿತ ಪ್ರಬಂಧಗಳು)

Share
  • Ships within 7 days
₹ 200
Description

ಒಟ್ಟು ರೂ. 250/- ಬೆಲೆಯ ಎರಡು ಪುಸ್ತಕಗಳು ಕೇವಲ ರೂ. 200/-

ತಾಳಿಕೋಟೆಯ ಕದನದಲ್ಲಿ (ಕಾದಂಬರಿ)

ಪುಟಗಳು: 164
ಮುಖಬೆಲೆ: ರೂ. 150 /-

ಚರಿತ್ರೆಯ ಅಧ್ಯಾಪಕ ವೈಕುಂಠರಾಯರು ಮೊದಲ ಬಾರಿಗೆ ಹಂಪಿಗೆ ಹೋದಾಗ ಹಂಪಿಯ ಮಣ್ಣಲ್ಲೇ ಅವರಿಗೊಂದು ಅಚ್ಚರಿ ಕಾದಿತ್ತು. ಆ ಅಚ್ಚರಿ ಅವರಿಗೆ ವಿಜಯನಗರ ಸಾಮ್ರಾಜ್ಯದ ಮತ್ತು ತಾಳಿಕೋಟೆಯ ಕದನದ ಒಂದು ವಿಶಿಷ್ಟವಾದ ಪರಿಚಯವನ್ನು ನೀಡಿತು. ಆ ಪರಿಚಯ ಅವರಿಗೆ ಅರಿವಿಲ್ಲದ ಒಂದು ದೊಡ್ಡ ಸಮಸ್ಯೆಯನ್ನೇ ಅವರ ಜೀವನದಲ್ಲಿ ತಂದೊಡ್ಡಿತು. ತಾಳಿಕೋಟೆಯ ಕದನಕ್ಕೂ, ಅವರ ಜೀವನದ ಸಮಸ್ಯೆಗೂ ಏನು ಸಂಬಂಧ? ಅವರು ಕಂಡ ಅಚ್ಚರಿಗಳು ಏನು? ಅವರ ನಿಜವಾದ ಸಮಸ್ಯೆ ಏನು? ಇವೆಲ್ಲವನ್ನೂ ಬಿಡಿಸಿ ಹೇಳುತ್ತದೆ ‘ತಾಳಿಕೋಟೆಯ ಕದನದಲ್ಲಿ’.

ಪಾರಿವಾಳಗಳು (ಲಲಿತ ಪ್ರಬಂಧಗಳು)

ಪುಟಗಳು: 104
ಮುಖಬೆಲೆ: ರೂ. 100 /-

ನಿಜ ಜೀವನದಲ್ಲಾದ ಘಟನೆಗಳ ಮೇಲೆ, ವ್ಯಂಗವನ್ನು ಇಟ್ಟುಕೊಂಡು ಬರೆದಿರುವ 12 ಪ್ರಬಂಧಗಳು. ಪಾರಿವಾಳಗಳ ತೊಂದರೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಅಮೇರಿಕಾದಲ್ಲಿ ಭಾರತೀಯರ ಜೀವನ, LPG ಗ್ಯಾಸ್ ಟ್ರಾನ್ಸ್ಫರ್ ಮಾಡುವಾಗ ಆದ ಬವಣೆ, ದಂತದ ಸಮಸ್ಯೆಗಳು ಇತ್ಯಾದಿ ಹತ್ತು ಹಲವಾರು ಪ್ರಬಂಧಗಳು ಹಾಸ್ಯೋಕ್ತಿಯೊಂದಿಗೆ ನಿಮ್ಮನ್ನು ಮನರಂಜಿಸಲಿವೆ.