‘ವಾರ್ತಾ ಭಾರತಿ’ಗೆ ನೆರವಾಗಿ.

Share
Min ₹ 10,000
Description

ಸತ್ಯ ಎಲ್ಲೆಡೆಗೆ ತಲುಪಬೇಕು - ಇದು ವಾರ್ತಾಭಾರತಿಯ ಧ್ಯೇಯ.

ಆದ್ದರಿಂದಲೇ ನಾವು ಕನ್ನಡ ಓದುಗ ಸಮುದಾಯಕ್ಕೆ ನಮ್ಮ ಆನ್ ಲೈನ್ ಆವೃತ್ತಿಯನ್ನು ಉಚಿತವಾಗಿ ಒದಗಿಸುತ್ತಿದ್ದೇವೆ. ನಮ್ಮ ಮುದ್ರಣ ಆವೃತ್ತಿಯನ್ನು ಕೂಡಾ ಅದರ ಉತ್ಪಾದನಾ ವೆಚ್ಚಕ್ಕಿಂತ ತೀರಾ ಕಡಿಮೆ ಬೆಲೆಗೆ ಮಾರುತ್ತಿದ್ದೇವೆ.ಈ ಮೂಲಕ, ಸಾಮಾನ್ಯ ಸತ್ಯಗಳು ಮಾತ್ರವಲ್ಲ, ಇತರ ಹಲವು ಮಾಧ್ಯಮಗಳಲ್ಲಿ ಸಿಗದಂತಹ ಸತ್ಯಗಳು ವಾರ್ತಾ ಭಾರತಿಯ ಲಕ್ಷಾಂತರ ಓದುಗರಿಗೆ ನಿತ್ಯ ಓದಲು ಸಿಗುತ್ತವೆ.
ವಾರ್ತಾ ಭಾರತಿ ಸಂಪೂರ್ಣ ಸ್ವತಂತ್ರ ಪತ್ರಿಕೆ. ಇದು ಯಾವುದೇ ಪಕ್ಷ, ಪಂಥ ಅಥವಾ ಸಂಘಟನೆಯ ಮುಖವಾಣಿಯಲ್ಲ. ಹಾಗೆಯೇ ಇದು ಯಾವುದೇ ಪುರೋಹಿತ, ಫುಡಾರಿ ಅಥವಾ ಉದ್ಯಮಿಯ ಕೈಗೊಂಬೆಯಲ್ಲ. ಆದ್ದರಿಂದಲೇ ಎಲ್ಲ ವಿಷಯಗಳಲ್ಲೂ ಯಾರದೇ ಮುಲಾಜಿಲ್ಲದೆ ಜನಪರ ಹಾಗೂ ನ್ಯಾಯ ಪರ ನಿಲುವು ತಾಳಲು ಈ ಪತ್ರಿಕೆಗೆ ಸಾಧ್ಯವಾಗಿದೆ.
ವಾರ್ತಾಭಾರತಿಯ ಈ ಸ್ವರೂಪವನ್ನು ಸಾವಿರಾರು ಓದುಗರು ನಿತ್ಯ ಪ್ರಶಂಸಿಸುತ್ತಾರೆ. ಈ ಕಾರಣಕ್ಕಾಗಿಯೇ ಪತ್ರಿಕೆಯ ಬಗ್ಗೆ ಅಭಿಮಾನ ಪಡುತ್ತಾ ಅದರ ಜೊತೆ ತಮ್ಮನ್ನು ಭಾವನಾತ್ಮಕವಾಗಿ ಜೋಡಿಸಿಕೊಂಡಿದ್ದಾರೆ. ಪತ್ರಿಕೆಯು ಈ ತನ್ನ ಅನನ್ಯ ವಿಶೇಷತೆಯನ್ನು ಸದಾ ಉಳಿಸಿಕೊಳ್ಳ ಬೇಕೆಂದು ಅಪೇಕ್ಷಿಸುತ್ತಾರೆ.
ನೀವು ವಾರ್ತಾಭಾರತಿಯ ನಿತ್ಯ ಓದುಗರೇ? ಈ ಪತ್ರಿಕೆಯ ಆಶಯಗಳ ಬೆಂಬಲಿಗರೇ? ಹಾಗಾದರೆ ವಾರ್ತಾಭಾರತಿಯನ್ನು ಬಲಪಡಿಸಿ ವಿಸ್ತರಿಸುವ ಕಾರ್ಯದಲ್ಲಿ ಪಾತ್ರವಹಿಸುವುದಕ್ಕೆ ನಿಮಗೊಂದು ಅವಕಾಶವಿದೆ.